ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉತ್ತರಕನ್ನಡ ಎಸ್ಪಿ ಡಾ. ಸುಮನ್ ವರ್ಗ. ನೂತನ ಎಸ್ಪಿಯಾಗಿ ವಿಷ್ಣುವರ್ದನ್ ನೇಮಕ.

ಉತ್ತರಕನ್ನಡ ಎಸ್ಪಿ ಡಾ. ಸುಮನ್ ವರ್ಗ. ನೂತನ ಎಸ್ಪಿಯಾಗಿ ವಿಷ್ಣುವರ್ದನ್ ನೇಮಕ.

Fri, 04 Nov 2022 03:10:37  Office Staff   SO News

ಬೆಂಗಳೂರು : ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸುಮನ್ ಫೆನ್ನೆಕರ್ ಅವರನ್ನ ವರ್ಗಾಯಿಸಿ ಸರ್ಕಾರ ಆದೇಶಿಸಿದೆ.

ವರ್ಷದ ಹಿಂದೆ ಉತ್ತರಕನ್ನಡ ಎಸ್ಪಿಯಾಗಿ ಡಾ ಸುಮನ್ ಅಧಿಕಾರಿ ಸ್ವೀಕರಿಸಿದ್ದರು. ಅಧಿಕಾರ ವಹಿಸಿಕೊಂಡಾಗಿನಿಂದ ಎಸ್ಪಿಯವರು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನ ತಡೆಯುವಲ್ಲಿ ಯಶಸ್ವಿಯಾಗಿದ್ದರು. 

ಉತ್ತಮ ಅಧಿಕಾರಿ ಎಂದು ಸಾರ್ವಜನಿಕರ ಪ್ರಶಂಸೆಗೆ ಕೂಡ  ಪಾತ್ರರಾಗಿದ್ದರು. ಪ್ರಾಮಾಣಿಕವಾಗಿ ಜನಸಾಮಾನ್ಯರ ದೂರುಗಳಿಗೆ ಸ್ಪಂದಿಸಿದ ಅವರನ್ನ ವರ್ಗಾಯಿಸಲು ಜಿಲ್ಲೆಯ ಸಚಿವರು ಹಾಗೂ ಶಾಸಕರು ಪ್ರಯತ್ನ ನಡೆಸಿದ್ದಾರೆಂಬ ಆರೋಪ ಕೂಡ ವ್ಯಕ್ತವಾಗಿತ್ತು. ಇದೀಗ ಸರ್ಕಾರ ಡಾ ಸುಮನ್ ಫೆನ್ನೆಕರ್ ಅವರನ್ನ ಬೆಂಗಳೂರಿನ ಸಿಐಡಿಗೆ ವರ್ಗಾಯಿಸಿದೆ. ಅವರ ಸ್ಥಾನಕ್ಕೆ ವಿಷ್ಣುವರ್ದನ್ ಅವರನ್ನ ನೇಮಕಗೊಳಿಸಿ ಆದೇಶಿಸಿದೆ. 


Share: