ಉಡುಪಿ: ಹಾಡುಹಗಲೇ ವಕೀಲರೊಬ್ಬರ ಮನೆಗೆ ಕಳ್ಳರು ನುಗ್ಗಿ ಸುಮಾರು 25 ಲಕ್ಷ ರೂ ಮೌಲ್ಯದ ನಗ ನಗದು ಕಳ್ಳತನ ಮಾಡಿದ ಘಟನೆ ನಗರದ ಕೋರ್ಟ್ ಹಿಂಬದಿ ರಸ್ತೆಯಲ್ಲಿ ನಡೆದಿದೆ.
ಉಡುಪಿಯ ವಕೀಲರಾದ ವಾಣಿ ವಿ ರಾವ್ ಎಂಬುವರ ಮನೆಗೆ ನುಗ್ಗಿದ ಕಳ್ಳರು ಮನೆಯ ಒಳಪ್ರವೇಶಿಸಿ, ಬೆಡ್ರೂಂನಲ್ಲಿದ್ದ ಕಬ್ಬಿಣದ ಕಪಾಟಿನ ಲಾಕರ್ನಲ್ಲಿ ಇರಿಸಿದ್ದ 45 ಸಾ.ರೂ. ನಗದು ಮತ್ತು ಕಪ್ಪು ಬಣ್ಣದ ವ್ಯಾನಿಟಿ ಬ್ಯಾಗ್ನಲ್ಲಿರಿಸಿದ್ದ 5 ಪವನ್ ತೂಕದ ಪಚ್ಚೆಕಲ್ಲು ಇರುವ ಚಿನ್ನದ ಬ್ರೇಸ್ಲೇಟ್, 6 ಪವನ್ ತೂಕದ ಎರಡು ಮುತ್ತಿನ ಬಳೆ, ಐದುವರೆ ಪವನ್ ತೂಕದ 2 ಚಿನ್ನದ ಖಡಗ ಬಳೆಗಳು, 6 ಪವನ್ ತೂಕದ ಚಿನ್ನದ ಸರ ಮತ್ತು 1 ಪವನ್ ತೂಕದ ಪೆಂಡೆಂಟ್, 6 ಪವನ್ ತೂಕದ ಮಲ್ಲಿಗೆ ಮೊಗ್ಗು ಚಿನ್ನದ ಸರ, ಒಂದುವರೆ ಪವನ್ ತೂಕದ ಚಿನ್ನದ ಸರ ಮತ್ತು ನೀಲಿ ಹರಳಿನ ಪೆಂಡೆಂಟ್, ನೀಲಿ ಕಲ್ಲಿನ ಬೆಂಡೋಲೆ ಮತ್ತು ಕರಮಣಿ ಹರಳಿನ ಬೆಂಡೋಲೆ – 2 ಜೊತೆ, ಜುಮ್ಕಿ ಮತ್ತು ಮಾಟಿ- 2 ಜೊತೆ, 1 ಪವನ್ ತೂಕದ ಚಿನ್ನದ ತುಂಡುಗಳು ಮತ್ತು ಕೊಕ್ಕೆ, 3 ಪವನ್ ತೂಕದ ಚಿನ್ನದ ನೆಕ್ಲೇಸ್, 2½ ಪವನ್ ತೂಕದ ಗ್ರೇನೆಟ್ ಹರಳಿನ ನೆಕ್ಲೇಸ್ ಮತ್ತು 3 ಪವನ್ನ ಗ್ರೇನೆಟ್ ಹರಳಿನ ಬಳೆ, 4 ಗ್ರಾಮ್ ನ ಚಿನ್ನದ ನಾಣ್ಯ-6 , 4 ರೇಷ್ಮೆ ಸೀರೆಗಳು ಮತ್ತು 1 ಸಾಧಾರಣ ಸೀರೆಗಳನ್ನು ಕಳವು ಮಾಡಲಾಗಿದೆ.
ಕಳುವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 25,00,000/- ಆಗಿದೆ. ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.