ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ: ’ನಮ್ಮ ಬಂಟ್ವಾಳ’ ವಾರಪತ್ರಿಕೆ ಬಿಡುಗಡೆ

ಬಂಟ್ವಾಳ: ’ನಮ್ಮ ಬಂಟ್ವಾಳ’ ವಾರಪತ್ರಿಕೆ ಬಿಡುಗಡೆ

Wed, 06 Jan 2010 18:53:00  Office Staff   S.O. News Service
ಬಂಟ್ವಾಳ, ಜನವರಿ 7: ನೂತನವಾಗಿ ಆರಂಭಗೊಂಡ ನಮ್ಮ ಬಂಟ್ವಾಳ ವಾರ ಪತ್ರಿಕೆಯ ಅನಾವರಣ ಸಮಾರಂಭವು‌ಇಂದು ಬಿಸಿ ರೋಡು ಕಳ್ಳಿಮಾರುವಿನಲ್ಲಿರುವ ನಮ್ಮ ಬಂಟ್ವಾಳ ಕಛೇರಿಯಲ್ಲಿ ನಡೆಯಲಿದೆ.
 
ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಪತ್ರಿಕೆ ಅನಾವರಣ ಗೊಳಿಸಲಿದ್ದು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರ್ಷ ಅಧ್ಯಕ್ಷತೆ ವಹಿಸಲಿದ್ದಾರೆ. ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಪತ್ರಿಕಾಶ ಕಛೇರಿ ಉದ್ಘಾಟಿಸಲಿದ್ದಾರೆ. ಜಿಲಾ ವಾರ್ತಾಧಿಕಾರಿ ರೋಹಿಣಿ,ಬಿಲ್ಲವ ಮಹಾಮಂಡಲದ ವಕ್ತಾರರಾದ ಹರಿಕೃಷ್ಣ ಬಂಟ್ವಾಳ, ಪುಂಜಾಲ ಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ತುಂಗಪ್ಪ ಬಂಗೇರ.ತಾಲೂಕು ಕ.ಸಾ.ಪ. ಅಧ್ಯಕ್ಷ ಬಿ.ತಮ್ಮಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭದ ಬಳಿಕ ಆತ್ಮೀಯ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಪತ್ರಿಕೆಯ ಬಗ್ಗೆ ಅನಿಸಿಕೆಗೆ ಸಾರ್ವಜನಿಕರಿಗೆ ಅವಕಾಶವಿದೆ ಎಂದು ಪತ್ರಿಕೆಯ ಸಂಪಾದಕ ಪ್ರಶಾಂತ್ ಪುಂಜಾಲಕಟ್ಟೆ ತಿಳಿಸಿದ್ದಾರೆ.


Share: