ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಇಂದಿನಿಂದ ಅಂಜುಮನ್ ಸಂಸ್ಥೆ ಶತಮಾನೋತ್ಸವ

ಇಂದಿನಿಂದ ಅಂಜುಮನ್ ಸಂಸ್ಥೆ ಶತಮಾನೋತ್ಸವ

Sun, 01 Jan 2023 19:25:38  Office Staff   SO News

ಭಟ್ಕಳ: ಜಿಲ್ಲೆಯ ಹಿರಿಯ, ಪ್ರತಿಷ್ಠಿತ ಅಂಜುಮನ್ ಸಂಸ್ಥೆ ಶತಮಾನೋತ್ಸವ ವರ್ಷ ಆಚರಿಸಿಕೊಂಡಿದ್ದು ಮುಕ್ತಾಯ ಸಮಾರಂಭ ಜ1 ಮತ್ತು 2ರಂದು ಅಂಜುಮಾನಾಬಾದ್‌ ಮೈದಾನದಲ್ಲಿ ನಡೆಯಲಿದೆ.

ನರ್ಸರಿಯಿಂದ, ಇಂಜಿನಿಯರಿಂಗ್, ಪಿ.ಜಿ. ತನಕದ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಅಂಜುಮನ್ ಸಂಸ್ಥೆ 100 ವರ್ಷಗಳ ಇತಿಹಾಸವನ್ನು ಮೆಲಕು ಹಾಕುತ್ತಿದೆ.ಅಂಜುಮನ್ 1919ರ ಸೆಪ್ಟೆಂಬರ್ ಒಂದರಂದು ತನ್ನ ಮೊತ್ತ ಮೊದಲ ಶಾಲೆಯನ್ನು ಬರೇ ಹನ್ನೊಂದು ವಿದ್ಯಾರ್ಥಿಗಳಿಂದ ಆರಂಭಿಸಿತು. 1929ರಲ್ಲಿ ಪ್ರಾಥಮಿಕ ಶಾಲೆ ಪ್ರಾರಂಭಿಸಿದ್ದು ನಂತರದ ದಿನಗಳಲ್ಲಿ ಸರಕಾರದ ಅನುದಾನ ಪಡೆಯಿತು. ನಂತರ ಉನ್ನತಿಗೇರಿ 1939ರ ಜೂನ್‌ನಲ್ಲಿ ಪ್ರೌಢ ಶಾಲೆ ದರ್ಜೆಗೇರಿತು. ಹೀಗೆ ಭಟ್ಕಳದಲ್ಲಿ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ಬೆಳಕು ಕಂಡಿತು.

ಮೊದಲ ತಂಡದಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 8. ಆದರೂ ಪ್ರತಿವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಹೋಗಿದೆ. ಪ್ರಸ್ತುತ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸಾಕಷ್ಟು ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳೂ ಇದ್ದಾರೆ. 1966 ರಲ್ಲಿ ಆಂಗ್ಲ ಮಾಧ್ಯಮ ವಿಭಾಗವನ್ನೂ ತೆರೆಯಲಾಯಿತು.

1968ರಲ್ಲಿ ಅಂಜುಮನ್ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಸ್ಥಾಪಿಸಲ್ಪಟ್ಟಿತು. ಪ್ರಾರಂಭದಲ್ಲಿ ವಿಜ್ಞಾನೇತರ ವಿಷಯಗಳನ್ನಷ್ಟೇ ಕಲಿಸಲಾಯಿತಾದರೂ ಒಂದೇ ವರ್ಷದಲ್ಲಿ ವಿಜ್ಞಾನ ವ್ಯಾಸಂಗವನ್ನೂ ಆರಂಭಿಸಲಾಯಿತು. ನಂತರದ ದಿನಗಳಲ್ಲಿ ಕಾಲೇಜು ಸ್ವಂತ ಕಟ್ಟಡವನ್ನು ಹೊಂದಿತು.1971ರ ಜೂನ್‌ನಲ್ಲಿ ಅಂಜುಮನ್ ಗರ್ಲ್ಸ್ ಹೈಸ್ಕೂಲ್, 1979ರಲ್ಲಿ ಇಲ್ಲಿ ಇಂಗ್ಲಿಷ್ ಮಾಧ್ಯಮ ವಿಭಾಗ ತೆರೆಯಲಾಯಿತು. ಹಾಗೆಯೇ 1980ರಲ್ಲಿ ಹೆಣ್ಣು ಮಕ್ಕಳಿಗಾಗಿ ಅಂಜುಮನ್ ಪವೂ ವಿದ್ಯಾಲಯ ಜನ್ಮತಾಳಿತು. ಈಗ ಇವೆಲ್ಲವೂ ಒಂದೇ ಕ್ಯಾಂಪಸ್‌ನಲ್ಲಿ ಕೆಲಸ ಮಾಡುತ್ತಿವೆ. ಮಹಿಳೆಯರು ಶೈಕ್ಷಣಿಕ ಕ್ಷೇತ್ರದಲ್ಲಿ ಆಧುನಿಕ ಶಿಕ್ಷಣ ಪಡೆಯುತ್ತಿದ್ದು ಅಂಜುಮನ್ ಸಾಕಷ್ಟು ಪ್ರತಿಭೆಗಳನ್ನು ಹೊರಹಾಕುತ್ತಿದೆ. ಈಗಾಗಲೇ ಅನೇಕ ಬ್ಯಾಂಕ್‌ ಗಳಿಸಿದ ಕೀರ್ತಿ ಇಲ್ಲಿನ ವಿದ್ಯಾರ್ಥಿಗಳದ್ದು, ಬ್ಯಾಂಕ್‌ಗಳಿಸಿದ.

ಅಂಜುಮನ್ ಇಂಜಿನಿಯರಿಂಗ್ ಕಾಲೇಜು ಉತ್ತರ ಕನ್ನಡ ಜಿಲ್ಲೆಯ ಪ್ರಥಮ ಖಾಸಗಿ ತಾಂತ್ರಿಕ ಕಾಲೇಜು ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ಜಿಲ್ಲೆಯ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಶುಲ್ಕದೊಂದಿಗೆ ಯಾವುದೇ ಭೇದಭಾವವಿಲ್ಲದೇ ಶಿಕ್ಷಣ ನೀಡಿದೆ. ಅನೇಕ ಬಡ ಕುಟುಂಬದ ಮಕ್ಕಳು ಇಂದು ತಾಂತ್ರಿಕ ಶಿಕ್ಷಣ ಹೊಂದಲು ಅಂಜುಮಾನ್ ಸಹಕಾರಿಯಾಗಿದೆ.

ಇಂದು ಅಂಜುಮನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮೆನೇಜ್‌ಮೆಂಟ್ ಕಾಲೇಜಿನಲ್ಲಿ ಕೂಡಾ ಬ್ಯಾಂಕ್‌ಗಳ ಸರಮಾಲೆಯನ್ನೇ ಕಾಣಬಹುದು. ಪ್ರಸನ್ನಕುಮಾರ್ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪ್ರಥಮ ಬ್ಯಾಂಕ್‌ ಪಡೆದು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ಪ್ರಶಂಸಿಸಲ್ಪಟ್ಟಿದ್ದರು. 1996ರಲ್ಲಿ ಸ್ಥಾಪನೆಗೊಂಡ ಅಂಜುಮಾನ್ ಆಡಳಿತ ಸಂಸ್ಥೆ ಕೀರ್ತಿಯನ್ನು ಇನ್ನಷ್ಟು ವೃದ್ಧಿಸಿದೆ. ಐದು ವಿಷಯಗಳಲ್ಲಿ ಆರು ಸೆಮಿಸ್ಟರ್ ನಡೆಸಲು ಪರವಾನಿಗೆ ಬಿಬಿಎ ಕೋಸ್ ೯ಗಳನ್ನು ನಡೆಸಲಾಗುತ್ತಿದ್ದು, ಕಂಪ್ಯೂಟರ್ ವಿಷಯ, ಲ್ಯಾಬ್ ಅತ್ಯಂತ ಮಹತ್ವದ ಮತ್ತು ತಾಜಾ ಮಾಹಿತಿಗಳನ್ನು ಪಡೆಯಲು ಇಂಟರ್‌ನೆಟ್ ಸೌಲಭ್ಯ ಕೂಡ ಇದೆ. ಎಂಬಿಎ ಮತ್ತು ಎಂಸಿಎ ಕೋರ್ಸ್ ಆರಂಭಿಸಲು ಮುಂದಡಿಯಿಟ್ಟಿದೆ. ನೂರು ವರ್ಷಗಳಿಂದ ಅಂಜುಮನ್ ಹಮಿ-ಏ-ಮುಸ್ಲಿಮೀನ್ ಅಕ್ಷರದ ತೇರನ್ನು ಎಳೆಯುತ್ತಿದ್ದು ಲಕ್ಷಾಂತರ ಜನ ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.

ಪ್ರಸ್ತುತ ಅಂಜುಮನ್‌ ಅಧ್ಯಕ್ಷರಾಗಿ ಹಿರಿಯರಾದ ಮುಝಮ್ಮಿಲ್ ಖಾಜಿಯಾ, ಪ್ರಧಾನಕಾರದರ್ಶಿಯಾಗಿ ಸಿದ್ಧಿಕ್ ಇಸ್ಮಾಯಿಲ್ ಕಾರ್ಯ ನಿರ್ವಹಿಸುತ್ತಿದ್ದು ಇವರೊಂದಿಗೆ ಸದಸ್ಯರು ಕೈಜೋಡಿಸಿದ್ದು, ಸಂಸ್ಥೆಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೇರಿಸುವಲ್ಲಿ ಸಫಲರಾಗಿದ್ದಾರೆ.


Share: