ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಆರೋಗ್ಯ ತುರ್ತು ಸೇವೆಗೆ, ಆಂಬುಲೆನ್ಸ್ ಕೊಡುಗೆ

ಆರೋಗ್ಯ ತುರ್ತು ಸೇವೆಗೆ, ಆಂಬುಲೆನ್ಸ್ ಕೊಡುಗೆ

Sat, 27 Aug 2022 04:47:43  Office Staff   SO News

ಬೆಂಗಳೂರು ಗ್ರಾಮಾಂತರ ಜಿಲ್ಲೆ : ಬೆಂಗಳೂರಿನ 'ಸೇವ್ ದಿ ಚಿಲ್ಡ್ರನ್' ಸ್ವಯಂ ಸೇವಾ ಸಂಘ ಸಂಸ್ಥೆ ಮತ್ತು ಖಾಸಗಿ ಸಂಸ್ಥೆಯಾದ ಎರಿಕ್‌ಸನ್ ಸಂಸ್ಥೆ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರೋಗ್ಯ ಇಲಾಖೆಯ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ತುರ್ತುಪರಿಸ್ಥಿತಿಯ ಸೇವೆಗೆ ಕೊಡುಗೆಯಾಗಿ ನೀಡಲಾಗುತ್ತಿರುವ ಸುಸಜ್ಜಿತ ಅಂಬುಲೆನ್ಸ್‌‌ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಬಾಲಕೃಷ್ಣ  ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು.

  ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ ರಮೇಶ್‌ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ನಟರಾಜ್.ಎಸ್,  ತಾಲೂಕು ಆರೋಗ್ಯ ಅಧಿಕಾರಿ ಡಾ.ಪರಮೇಶ್ವರ್, ಎರಿಕ್‌ಸನ್‌ ಸಂಸ್ಥೆಯ ನಿರ್ದೇಶಕ ಗ್ಲೋಬಲ್ ಇಂಡಿಯಾ ಬಿಪ್ಲಬ್ ದತ್ತ, ದೇವಿ ಚಿಲ್ಡ್ರನ್ ಸ್ವಯಂ ಸೇವಾ ಸಂಸ್ಥೆಯ ನಿರ್ದೇಶಕ ಜತೀನ್ ಮಂದೋರ್, ಹಿರಿಯ ಕಾರ್ಯ ನಿರ್ವಹಣಾಧಿಕಾರಿ ರಶ್ಮಿ ಮತ್ತು ಚಂದ್ರಶೇಖರ, ಸ್ವಯಂ ಸೇವಾ ಸಂಘದ ಸದಸ್ಯ ಲಿಸ್ಸಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.


Share: