ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಆಮ್ ಆದ್ಮಿ ಪಾರ್ಟಿಯ ಡಾ.ನಸೀಮ್ ಖಾನ್ ರಿಂದ ನಾಮಪತ್ರ ಸಲ್ಲಿಕೆ

ಆಮ್ ಆದ್ಮಿ ಪಾರ್ಟಿಯ ಡಾ.ನಸೀಮ್ ಖಾನ್ ರಿಂದ ನಾಮಪತ್ರ ಸಲ್ಲಿಕೆ

Thu, 20 Apr 2023 01:59:03  Office Staff   SOnews


ಭಟ್ಕಳ: ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ (ಎಎಪಿ)  ಅಭ್ಯರ್ಥಿಯಾಗಿ ಡಾ.ನಸೀಮ್ ಖಾನ್ ಬುಧವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದರು. 

ಈ ಸಂದರ್ಭದಲ್ಲಿ ಎಎಪಿ ಉತ್ತರಕನ್ನಡ ಜಿಲ್ಲಾಧ್ಯಕ್ಷ ಬಾಲಕೃಷ್ಣ ಪಿ.ನಾಯ್ಕ ಮಾತನಾಡಿದ್ದು,ದೇಶದಲ್ಲಿ ಪ್ರಜ್ಞಾವಂತ ಮತದಾರರಿದ್ದು ಇಡೀ ದೇಶದಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆ ಆಗುತ್ತಿದೆ. ಭಟ್ಕಳದಲ್ಲಿಯೂ ಜನರು ಈ ಬಾರಿ ಒಂದು ಕ್ರಾಂತಿಯನ್ನು ತರಲಿದ್ದಾರೆ ಎಂದರು. ದೇಶವನ್ನು ಗುಡಿಸಿ ಗುಂಡಾAತರ ಮಾಡುತ್ತಿರುವ ರಾಜಕೀಯ ಪಕ್ಷಗಳಿಗೆ ಸರಿಯಾದ ಉತ್ತರ ನೀಡಲಿದ್ದು ಅದಕ್ಕಾಗಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದರು. ಉ.ಕ.ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಆರು ಕ್ಷೇತ್ರದ ಮತದಾರರು ನಮ್ಮ ಕೈಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದರು. 

ಅಭ್ಯರ್ಥಿ ಡಾ.ನಸೀಮ್ ಖಾನ್ ಮಾತನಾಡಿ, ನಾವು ಪ್ರತಿ ಹಳ್ಳಿ ಹಳ್ಳಿಗೂ ಹೋಗಿದ್ದೇವೆ. ಪಕ್ಷದ ಸಿದ್ಧಾಂತವನ್ನು ಜನರು ಒಪ್ಪಿಕೊಳ್ಳುತ್ತಿದ್ದಾರೆ. ದೇಶದ ಅಭಿವೃದ್ಧಿಗಾಗಿ ಜನರು ಆಮ್ ಆದ್ಮಿ ಪಾರ್ಟಿಯನ್ನು ಬಯಸುತ್ತಿದ್ದಾರೆ. ನಾವು ಹಣ ಕೊಟ್ಟು ಜನರು ಸೇರಿಸುವುದರ ಮೇಲೆ ವಿಶ್ವಾಸ ಇಡಲ್ಲ. ಜನರು ನಮ್ಮ ಸಿದ್ಧಾಂತವನ್ನು ನಂಬಿ ಬರುತ್ತಿದ್ದಾರೆ ಎಂದರು. 
 


Share: