ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಆಭರಣ ಕಳ್ಳತನ: ಬಾಲಾಪರಾಧಿಯ ಸಮೇತ ಆಭರಣ ವಶಕ್ಕೆ

ಆಭರಣ ಕಳ್ಳತನ: ಬಾಲಾಪರಾಧಿಯ ಸಮೇತ ಆಭರಣ ವಶಕ್ಕೆ

Sun, 12 Jun 2022 00:45:20  Office Staff   sonews


ಕುಮಟಾ: ಕಳೆದ 5 ದಿನಗಳ ಹಿಂದೆ ಮನೆಯ ಬಾಗಿಲಿನ ಬೀಗ ಮುರಿದು ಒಳಗೆ ನುಗ್ಗಿ ಕಳ್ಳತನ ನಡೆಸಿದ್ದ ಬಾಲಾಪರಾಧಿಯನ್ನು ಕುಮಟಾ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪರಾಧಿಯಿಂದ 103 ಗ್ರಾ ತೂಕದ ಒಟ್ಟು 5.15 ಲಕ್ಷ ರು. ಮೌಲ್ಯದ ಬಂಗಾರದ ಆಭರಣಗಳನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ.

FB_IMG_1654952984800.jpg

ತಾಲೂಕಿನ ಮಿರ್ಜಾನ ಸಮೀಪದ ಬಾಲಾಪರಾಧಿಯು ಕೋಡ್ಕಣಿ, ಗ್ರಾಮದ ಹಳಗೇರಿ, ಕೇರಿಯ ರಮೇಶ ವಾಸುದೇವ ನಾಯ್ಕ ಎಂಬುವವರ ಮನೆಗೆ ನುಗ್ಗಿ ಮನೆಯೊಳಗೆ ಯಾರೂ ಇಲ್ಲದ ಸಂದರ್ಭದಲ್ಲಿ ಬಂಗಾರದ ಸರ, ದೊಡ್ಡ ಬಳೆ, ಚಿಕ್ಕ ಬಳೆಯನ್ನು ಕಳ್ಳತನ ಮಾಡಿದ್ದನು. ಈ ಬಗ್ಗೆ ಮಾಹಿತಿ ಪಡೆದ ಕುಮಟಾ ಪೋಲಿಸರು ತನಿಖೆ ನಡೆಸಿ, ಬಾಲಾಪರಾಧಿಯನ್ನು ಆಭರಣಗಳ ಸಮೇತ ವಶಕ್ಕೆ ಪಡೆದಿದ್ದಾರೆ.


Share: