ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಆಧಾರ್-ಎಪಿಕ್ ಜೋಡಣೆ ವಿಶೇಷ ನೋಂದಣಿ ಶಿಬಿರ

ಆಧಾರ್-ಎಪಿಕ್ ಜೋಡಣೆ ವಿಶೇಷ ನೋಂದಣಿ ಶಿಬಿರ

Sat, 03 Sep 2022 13:54:00  Office Staff   SO News

ಉಡುಪಿ : ಮತದಾರರು ಸ್ವಯಂ ಪ್ರೇರಿತರಾಗಿ ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ಪಟ್ಟಿಯೊಂದಿಗೆ ಜೋಡಣೆ ಮಾಡಲು ಸೆಪ್ಟಂಬರ್ 4 ಮತ್ತು 18 ನ್ನು ವಿಶೇಷ ನೋಂದಣಿ ದಿನಗಳನ್ನಾಗಿ ಆಯೋಜಿಸಲಾಗಿದೆ.

ಈ ದಿನಗಳಂದು ಜಿಲ್ಲೆಯ ಮತದಾರರು ತಮ್ಮ ಹತ್ತಿರದ ಮತಗಟ್ಟೆಗಳಲ್ಲಿರುವ ಬಿ.ಎಲ್.ಓ ಅಧಿಕಾರಿಗಳನ್ನು ಸಂಪರ್ಕಿಸಿ, ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ಪಟ್ಟಿಗೆ ಜೋಡಣೆ ಮಾಡಿಕೊಳ್ಳಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. 


Share: