ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಆತ್ಮವಿಶ್ವಾಸದಿಂದ ಅದ್ಭುತವಾದುದನ್ನು ಪಡೆಯಲು ಸಾಧ್ಯ: ಡಾ.ಸವಿತಾ ಕಾಮತ್

ಆತ್ಮವಿಶ್ವಾಸದಿಂದ ಅದ್ಭುತವಾದುದನ್ನು ಪಡೆಯಲು ಸಾಧ್ಯ: ಡಾ.ಸವಿತಾ ಕಾಮತ್

Wed, 11 Jan 2023 06:41:44  Office Staff   so news

ಭಟ್ಕಳ: ನಮ್ಮ ಮೇಲೆ ನಾವು ವಿಶ್ವಾಸವಿಟ್ಟು ಸಾಧಿಸಲು ಹೊರಟರಿ ಅದ್ಭುತವಾದದ್ದನ್ನು ಪಡೆಯಲು ಸಾಧ್ಯ ಎಂದು ತಾಲೂಕಾ ಆರೋಗ್ಯಾದಿ ಕಾ ಡಾ.ಸವಿತಾ ಕಾಮತ ಹೇಳಿದರು.
ಅವರು ದಿ ನ್ಯೂ ಇಂಗ್ಲೀಷ ಪಿ.ಯು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಾಧನಾ 2023 ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಭಟ್ಕಳ ಎಜ್ಯುಕೇಶನ ಟ್ರಸ್ಟನ ಅಧ್ಯಕ್ಷ ಡಾ.ಸುರೇಶ್‌ ನಾಯಕ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ. ವಿರೇಂದ್ರ ವಿ.ಶ್ಯಾನಭಾಗ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಕಾರ್ತಿಕ ಶ್ಯಾನಭಾಗ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಂದೇಶ ಆಚಾರ್ಯ ಸ್ವಾಗತಿಸಿದರು. ಅರ್ಜುನ ವಂದಿಸಿದರು. ದಿಶಾ ಮತ್ತು ಶ್ರೀಭಾಗ್ಯಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕ್ರೀಡೆ ಮತ್ತು ಪತ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿಭಾಗವಾರು ಅತ್ಯುತ್ತಮ ವಿದ್ಯಾರ್ಥಿಗಳಾಗಿ ಕಲಾ ವಿಭಾಗದಲ್ಲಿ ಆರತಿ ನಾಯ್ಕ, ವಾಣಿಜ್ಯದ ಗಣಕ ಶಾಸ್ತ್ರ ವಿಭಾಗದಲ್ಲಿ ಧೀರಜ ಶೆಟ್ಟಿ, ವಾಣಿಜ್ಯದ ಸಂಖ್ಯಾಶಾಸ್ತ್ರದ ವಿಭಾಗದಲ್ಲಿ ಜೀವೋತ್ತಮ ಮತ್ತು ಧನುಷ ಶೆಟ್ಟಿ, ವಿಜ್ಞಾನ ವಿಭಾಗದಲ್ಲಿ ತಿಲಕ ಮೊಗೇರ ಮತ್ತು ಮನೀಷಾ ಮೊಗೇರ ಹಾಗೂ ಕಾಲೇಜಿನ ಅತ್ಯುತ್ತಮ ವಿಧ್ಯಾರ್ಥಿಯಾಗಿ ವರಮಹಾಲಕ್ಷ್ಮೀ ಪ್ರಶಸ್ತಿಯನ್ನು ಪಡೆದುಕೊಂಡರು. 
ನಂತರ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳಿಂದ ಮನೋರಂಜನೆ ಕಾರ್ಯಕ್ರಮ ನಡೆಯಿತು.


Share: