ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮಹಿಳೆ ಸಾವು

ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮಹಿಳೆ ಸಾವು

Mon, 10 Oct 2022 00:52:59  Office Staff   S.O. News Service

ಭಟ್ಕಳ: ನೆಲಸಮ ಬಾವಿಯ ಸಮೀಪವಿದ್ದ ಹುಲ್ಲು ಕಟಾವು ಮಾಡಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮಹಿಳೆಯೋರ್ವಳು ಸಾವನ್ನಪ್ಪಿರುವ ಘಟನೆ ಹಾಡವಳ್ಳಿ ಯಲ್ಲಿ ನಡೆದಿದೆ. 
ಮೃತ ಮಹಿಳೆಯನ್ನು ಗೌರಿ ಸುಬ್ಬಯ್ಯ ನಾಯ್ಕ ಹಾಡವಳ್ಳಿ  ಹೂವಿನಹಕ್ಕಲ ನಿವಾಸಿ ಎಂದು ತಿಳಿದು ಬಂದಿದೆ.
ಈಕೆ ಹಾಡವಳ್ಳಿ ಜೈನ್ ಬಸದಿಯಲ್ಲಿ ಕೆಳೆದ ೨೫ ವರ್ಷ ದಿಂದ  ಕೆಲಸ ಮಾಡಿಕೊಂಡಿದ್ದವಳು ಎನ್ನಲಾಗಿದೆ,
ಬೆಳಗ್ಗೆ  ಜೈನ್ ಬಸದಿಯ ಆವರಣದಲ್ಲಿದ್ದ ಕೆಲಸ ಮಾಡುತ್ತಿದ್ದ ಸಮಯದಲ್ಲಿ ನೆಲಸಮ ಬಾವಿಯ ಸಮೀಪವಿದ್ದ ಹುಲ್ಲು ಕಟಾವು ಮಾಡಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಪಕ್ಕದಲ್ಲಿದ್ದ ಬಾವಿಯಲ್ಲಿ ಬಿದ್ದು ನೀರು ಕುಡಿದು ಸಾವನಪ್ಪಿದ್ದಾಳೆ.

 ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಹಾಗೂ ೧೧೨ ವಾಹನ ತೆರಳಿ ಸ್ಥಳೀಯ   ಜನರ ಸಹಾಯ ದಿಂದ
ಬಾವಿಯಲ್ಲಿ ಇದ್ದ ಶವವನ್ನು ಮೇಲೆ ಕ್ಕೆ ಎತ್ತಲಾಹಿತ್ತು. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಮೃತ ಮಹಿಳೆ ಗಂಡ ಸುಬ್ಬಯ್ಯ ನಾಗಪ್ಪ ನಾಯ್ಕ ದೂರು ನೀಡಿದ್ದು ಪ್ರಕರಣವನ್ನು ದಾಖಲಿಸಿ ಕೊಂಡ  ಪಿಎಸೈ ಭರತ ಕುಮಾರ ಶವವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ಮಹಿಳೆ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದ್ದು,ಮೃತ ರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

 


Share: