ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ:ಸಾರ್ವಜನಿಕ ಸ್ಥಳ ಅತಿಕ್ರಮಿಸಿ ಕಟ್ಟಿದ ಮನೆ-ಅಂಗಡಿಗಳಿಗೆ ತಹಸೀಲ್ದಾರ್ ಭೇಟಿ

ಬಂಟ್ವಾಳ:ಸಾರ್ವಜನಿಕ ಸ್ಥಳ ಅತಿಕ್ರಮಿಸಿ ಕಟ್ಟಿದ ಮನೆ-ಅಂಗಡಿಗಳಿಗೆ ತಹಸೀಲ್ದಾರ್ ಭೇಟಿ

Tue, 13 Apr 2010 17:44:00  Office Staff   S.O. News Service

ಬಂಟ್ವಾಳ, ಏಪ್ರಿಲ್ ೧೩: ಸಾರ್ವಜನಿಕ ಸ್ಥಳವನ್ನು ಅತಿಕ್ರಮಿಸಿ, ಮನೆ ಅಂಗಡಿಗಳನ್ನು ನಿರ್ಮಿಸಿದ ಪುದು ಗ್ರಾಮದ ಸುಜೀರುವಿಗೆ ತಾಲೂಕು ತಹಶೀಲ್ದಾರ್ ಸಿ.ಎನ್.ಮಂಜುನಾಥ್ ಮಂಗಳವಾರ ಭೇಟಿನೀಡಿ ಪರಿಶೀಲನೆ ನಡೆಸಿದರು. ಮಾರಿಪಳ್ಳದಿಂದ ಸುಜೀರು ದೈವಸ್ಥಾನದವರೆಗಿನ ಸಾರ್ವಜನಿಕ ರಸ್ತೆಯ ಜಮೀನನ್ನು ಸ್ಥಳೀಯರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಹಾಗೂ ಇವರಿಗೆ ಮನೆ ನಂಬ್ರ,ವಿದ್ಯುತ್ ಸಂಪರ್ಕ, ನಳ್ಳಿನೀರು

 

13-bnt2.jpg 

 

ಹಾಗೂ ಸರ್ಕಾರಿ ಸವಲತ್ತನ್ನು ನೀಡುವುದರ ಮೂಲಕ ಪುದು ಗ್ರಾಮಪಂಚಾಯತ್ ಕೂಡ ಈ ಅತಿಕ್ರಮಣದಲ್ಲಿ ಶಾಮೀಲಾಗಿದೆ ಎಂದು ಸ್ಥಳೀಯರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆಯಂತೆ ತಹಶೀಲ್ದಾರ ಇಂದು ಸ್ಥಳಕ್ಕೆ ಭೇಟಿ ನೀಡಿದ್ದು. ಅತಿಕ್ರಮಿತ ಪ್ರದೇಶವನ್ನು ವಾರದೊಳಗಾಗಿ ತೆರವು ಗೊಳಿಸಿವಂತೆ ಗ್ರಾ.ಪಂ.ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ. 

 

 


Share: