ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶಿರ್ವ: ಮಹಿಳಾ ಸಬಲೀಕರಣದ ಕಲ್ಪನೆಯ ಹಿಂದೆ ಬಂಡವಾಳಶಾಹಿಗಳ ಅಗಮ್ಯ ಕಾರ್ಯಸೂಚಿ - ಡಾ. ಪಿ.ಎಲ್. ಧರ್ಮ

ಶಿರ್ವ: ಮಹಿಳಾ ಸಬಲೀಕರಣದ ಕಲ್ಪನೆಯ ಹಿಂದೆ ಬಂಡವಾಳಶಾಹಿಗಳ ಅಗಮ್ಯ ಕಾರ್ಯಸೂಚಿ - ಡಾ. ಪಿ.ಎಲ್. ಧರ್ಮ

Fri, 16 Oct 2009 07:05:00  Office Staff   S.O. News Service
ಶಿರ್ವ, ಅ.15: ರಾಜಕೀಯ ಪ್ರವೇಶ, ಆರ್ಥಿಕ ಅಭಿವೃದ್ಧಿಯಿಂದ ಮಾತ್ರ ಮಹಿಳೆಯರ ಸಬಲೀಕರಣ ಸಾಧ್ಯವೆಂಬ ಕಲ್ಪನೆಯ ಹಿಂದೆ ಬಂಡವಾಳಶಾಹಿಗಳ ಹಿಡನ್ ಅಜೆಂಡಾ ಅಡಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಡಾ.ಪಿ.ಎಲ್. ಧರ್ಮ ಅಭಿಪ್ರಾಯ ಪಟ್ಟಿದ್ದಾರೆ.

ಯುಜಿಸಿ ಪ್ರಾಯೋಜಕತ್ವದಲ್ಲಿ ಗುರುವಾರ ಶಿರ್ವ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿ ನಲ್ಲಿ ಆಯೋಜಿಸಲಾದ ‘ಸ್ಥಳೀಯ ಆಡಳಿತದಲ್ಲಿ ಮಹಿಳಾ ಸಬಲೀಕರಣ- ವಿಷಯ ಮತ್ತು ಸವಾಲು ಗಳು’ ಕುರಿತ ರಾಜ್ಯ ಮಟ್ಟದ ವಿಚಾರಸಂಕಿರಣದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡುತ್ತಿದ್ದರು.

 ಕೇವಲ ಮೀಸಲಾತಿಯಿಂದ ಮಾತ್ರ ಮಹಿಳೆಯರ ಸಬಲೀಕರಣ ಸಾಧ್ಯವಿಲ್ಲ. ಮಹಿಳೆ ಉತ್ತಮ ತಾಯಿಯಾಗಿ, ಮನುಷ್ಯಳಾಗಿ, ಸಮಾಜ ದಲ್ಲಿರುವ ಎಲ್ಲ ಸಮುದಾಯದವರೊಂದಿಗೆ ಸಾಮ ರಸ್ಯದ ಬದುಕು ನಡೆಸುವಂತಹ ಮನೋಭಾವ ವನ್ನು ಬೆಳೆಸಿಕೊಳ್ಳುವುದು ಕೂಡ ಇಲ್ಲಿ ಮುಖ್ಯವಾ ಗಿದೆ ಎಂದು ಧರ್ಮ ಹೇಳಿದರು.

ಆಧುನಿಕ ಭಾಷೆಯಲ್ಲಿ ಗ್ರಾಮೀಣ, ಬಡ, ಹಿಂದುಳಿದ ವರ್ಗಗಳ ಮಹಿಳೆಯರು ನಿಷ್ಪ್ರಯೋಜಕರು. ಅವರು ಉತ್ತಮ ತಾಯಿ, ಮನುಷ್ಯ, ಜಾತ್ಯತೀತರಾಗಿದ್ದರೂ ಆರೋಗ್ಯಕರ ಸಮಾಜಕ್ಕಾಗಿ ಅವರಿಗೆ ಶಿಕ್ಷಣ ನೀಡಬೇಕು ಮತ್ತು ಬದುಕಿನ ಬಗೆಗಿಂತ ಅವರ ಸೃಜನಶೀಲತೆಗಾಗಿ ತರಬೇತಿ ನೀಡಬೇಕೆಂಬುದು ಸಬಲೀಕರಣದ ಹಿಂದಿರುವ ಹುನ್ನಾರವಾಗಿದೆ ಎಂದು ಅವರು ಆರೋಪಿಸಿದರು.

ವಿಚಾರ ಸಂಕಿರಣವನ್ನು ಕರ್ನಾಟಕ ಸರಕಾರದ ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕಿ ಎ.ರತ್ನಕಾಂತಿ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಹಿಳಾ ಹೋರಾಟಗಾರ್ತಿ ಮೈಸೂರಿನ ಡಾ.ರತಿ ರಾವ್, ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ರೆ.ಫಾ.ಕ್ಷೇವಿಯರ್ ಗೋಮ್ಸ್ ಭಾಗವಹಿಸಿದ್ದರು.

ಅಧ್ಯಕ್ಷತೆಯನ್ನು ಶಿರ್ವ ವಿದ್ಯಾವರ್ಧಕ ಸಂಘದ ಸಂಚಾಲಕ ಕೆ.ರಾಜಾರಾಮ್ ಶೆಟ್ಟಿ ವಹಿಸಿದ್ದರು. ಕಾರ್ಯದರ್ಶಿ ಸುಬ್ಬಯ್ಯ ಹೆಗ್ಡೆ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಪ್ರೊ. ನಯನ ಎಂ.ಪಕ್ಕಳ ಅತಿಥಿಗಳನ್ನು ಪರಿಚಯಿಸಿ ದರು. ಉಪಪ್ರಾಂಶುಪಾಲ ಡಾ.ಸುಧಾಕರ್ ಮಾರ್ಲ ವಂದಿಸಿದರು. ಪ್ರೊ.ಸುಪ್ರಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Share: