ಹೊನ್ನಾವರ : ಇಲ್ಲಿನ ಅರಬ್ಬಿಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್ ರಕ್ಷಣೆ ಮಾಡಿ ಅದರಲ್ಲಿದ್ದ ಮೀನುಗಾರರನ್ನ ರಕ್ಷಿಸಿದ ಘಟನೆ ನಡೆದಿದೆ.
ಜೈ ಭಾರತ್ ಹೆಸರಿನ ಬೋಟ್ ಮತ್ತು ಅದರಲ್ಲಿದ್ದ ಮೀನುಗಾರರನ್ನ ರಾಜು ತಾಂಡೇಲ ಅವರ ಲಲಿತ್ ಹೆಸರಿನ ಬೋಟ್ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ರಮೇಶ ತಾಂಡೇಲ ಮಾಲಿಕತ್ವದ ಜೈಭಾರತ್ ಬೋಟಿನಲ್ಲಿದ್ದ ನಾಲ್ವರು ಮೀನುಗಾರರಿದ್ದರು. ಆಳ ಸಮುದ್ರದಲ್ಲಿ ಬೋಟ್ ಮುಳುಗುತ್ತಿದ್ದಾಗ ಸಹಾಯಕ್ಕಾಗಿ ಅಂಗಲಾಚಿದರು. ಈ ವೇಳೆ ಅಲ್ಲಿಯೇ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರು ರಕ್ಷಿಸಿ, ಮುಳುಗುತ್ತಿದ್ದ ಬೋಟ್‌ನ್ನ ಕಾಸರಕೋಡು ಬಂದರಿಗೆ ಕರೆ ತಂದಿದ್ದಾರೆ.