ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅರಣ್ಯ ಜಾಗದಲ್ಲಿ ಅನಧಿಕೃತವಾಗಿ ರಸ್ತೆ ನಿರ್ಮಾಣ:ರಸ್ತೆ ಮುಚ್ಚಿಸುವಂತೆ ಸ್ಥಳೀಯರು ಆಗ್ರಹ

ಅರಣ್ಯ ಜಾಗದಲ್ಲಿ ಅನಧಿಕೃತವಾಗಿ ರಸ್ತೆ ನಿರ್ಮಾಣ:ರಸ್ತೆ ಮುಚ್ಚಿಸುವಂತೆ ಸ್ಥಳೀಯರು ಆಗ್ರಹ

Tue, 01 Nov 2022 05:43:55  Office Staff   so news

ಭಟ್ಕಳ:ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ೧೫೦ಮಿ. ರಸ್ತೆ ನಿರ್ಮಿಸಲಾಗಿದ್ದು ಇದರಿಂದ ಕೃಷಿ ಭೂಮಿಗಳಿಗೆ ಹಾನಿಯಾಗಲಿದೆ ಎಂದು ತಾಲೂಕಿನ ತಲಗೋಡ ಕೋಟಿಮನೆ ಭಾಗದಲ್ಲಿ ಸ್ಥಳೀಯರು ಸೋಮವಾರ ಪ್ರತಿಭಟನೆ ನಡೆಸಿ ರಸ್ತೆ ಮುಚ್ಚಿಸುವಂತೆ ಅರಣ್ಯ ಅಧಿಕಾರಿಗಳನ್ನು ಆಗ್ರಹಿಸಿದರು.

ಕಾರ್ಗದ್ದೆ ನಿವಾಸಿಯೊರ್ವರು ತಲಗೋಡ ಕೋಟಿಮನೆ ಭಾಗದಲ್ಲಿ ಅರಣ್ಯ ಪ್ರದೇಶದ ಅಂದಾಜು ೧೫೦ ಮೀಟರ ವ್ಯಾಪ್ತಿಯ ಮರಗಳನ್ನು ಕಡಿದು ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿಕೊಂಡಿದ್ದರು. ಈ ರಸ್ತೆಯನ್ನು ಅವರು ಮಣ್ಣು ಲಾರಿಯ ಸಾಗಾಟಕ್ಕಾಗಿ ನಿರ್ಮಾಣ ಮಾಡಿದ್ದಾರೆ ಎನ್ನುವುದು ಸ್ಥಳೀಯರ ಆರೋಪ. ಖಾಸಗಿ ವ್ಯಕ್ತಿಯ ಮಾಲ್ಕಿ ಜಮೀನಿಗೆ ತೆರಳಲು ಎರಡು ಪರ್ಯಾಯ ಮಾರ್ಗಗಳಿವೆ ಆದರೂ ಈ ಮಾರ್ಗವನ್ನು ಮಣ್ಣು ಸಾಗಾಟ ಮಾಡಲು ನಿರ್ಮಾಣ ಮಾಡಿದ್ದಾರೆ. ಈ ಭಾಗದಲ್ಲಿ ಅಂದಾಜು ೫೦೦ ಎಕರೆ ಕೃಷಿ ಭೂಮಿ ಇದೆ. ಈ ಮಾರ್ಗದಲ್ಲಿ ಮಣ್ಣು ಲಾರಿಗಳು ತಿರುಗಾಟ ನಡೆಸಿದರೇ ಇಲ್ಲಿನ ಕೃಷಿ ಭೂಮಿಗೆ ಹಾನಿಯಾಗುತ್ತದೆ. ಅರಣ್ಯ ಅಧಿಕಾರಿಗಳು ಈ ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಸ್ಥಳೀಯರಾದ ಪ್ರಕಾಶ ನಾಯ್ಕ ಆಗ್ರಹಿಸಿದರು.ಈ ಸಂದರ್ಭದಲ್ಲಿ ಕೇಶವ ನಾಯ್ಕ,

ಭಾಸ್ಕರ ನಾಯ್ಕ,ಮಂಜುನಾಥ ನಾಯ್ಕ,ಮೋಹನ್ ನಾಯ್ಕ,ರಾಮದಾಸ ನಾಯ್ಕ,ಲೋಕೇಶ್ ನಾಯ್ಕ,ನಾಗರಾಜ್ ನಾಯ್ಕ ಮುಂದಾದರು ಉಪಸ್ಥಿತರಿದ್ದರು.

ಈ ಬಗ್ಗೆ ಆರ್‌ಎಪ್‌ಒ ಶರತ್ ಶೆಟ್ಟಿ ಮಾತನಾಡಿ

ನಮ್ಮ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದು

ಪರವಾನಿಗೆ ಪಡೆಯದೆ ಅನಿಧಿಕೃತವಾಗಿ ಮರ ಕಡಿದು ರಸ್ತೆ ನಿರ್ಮಿಸಿದ ವೆಂಕಟ್ರಮಣ ಮಾಸ್ತಪ್ಪ ನಾಯ್ಕ ವಿರುದ್ದ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದ್ದು ಅಲ್ಲದೆ ಈಗಾಗಲೇ ನಿರ್ಮಾಣ ಮಾಡಿರುವ ರಸ್ತೆಗೆ ಹೊಂಡ ತೆಗೆದು ವಾಹನಗಳು ದಾಟದಂತೆ ನಿರ್ಭಂದಿಸುವುದಾಗಿ  ತಿಳಿಸಿದ್ದಾರೆ.


Share: