ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಪರಿಚಿತ ವಾಹನ ಢಿಕ್ಕಿ ಹೊಡೆದು ಅಲೆಮಾರಿ ಮಹಿಳೆ ಸಾವು

ಅಪರಿಚಿತ ವಾಹನ ಢಿಕ್ಕಿ ಹೊಡೆದು ಅಲೆಮಾರಿ ಮಹಿಳೆ ಸಾವು

Mon, 10 Oct 2022 01:01:46  Office Staff   S.O. News Service

ಭಟ್ಕಳ:ಅಪರಿಚಿತ ವಾಹನವೊಂದು ಅಲೆಮಾರಿ ಭಿಕ್ಷುಕಿ ಹಾಗೂ ಮಾನಸಿಕ ಅಶ್ವಸ್ತ ಮಹಿಳೆಗೆ ಢಿಕ್ಕಿ ಹೊಡೆದು ಪರಿಣಾಮ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬೈಲೂರು ಕ್ರಾಸ್ ಸಮೀಪ ನಡೆದಿದೆ. 
ಪಿರ್ಯಾದಿಯು ತನ್ನ ಸ್ನೇಹಿತನೊಂದಿಗೆ ವೈಯಕ್ತಿಕ ಕೆಲಸದ ನಿಮಿತ್ತ ಹೊನ್ನಾವರಕ್ಕೆ ಹೋಗಿ ಮರಳಿ ಬರುವ ವೇಳೆ ರಾಷ್ಟ್ರೀಯ ಹೆದ್ದಾರಿ 66 ಬೈಲೂರು ಕ್ರಾಸ್ ಸಮೀಪ ಒಂದು ಬದಿಯಲ್ಲಿ ಸುಮಾರು 35 ರಿಂದ 40 ವರ್ಷದ ಅಪರಿಚಿತ ಮಹಿಳೆ ಮೃತಳಾಗಿ ಬಿದ್ದುಕೊಂಡಿದ್ದನ್ನು ಘಮನಿಸಿದ್ದು. ಮೃತಳ ಎರಡು ಕಾಲಿನ ಪಾದಗಳಿಗೆ ಗಂಭೀರವಾಗಿ ಗಾಯಗಳಾಗಿರುತ್ತದೆ. ಈಕೆ ಕೆಲವು ದಿನಗಳಿಂದ ಹರಿದು ಬಟ್ಟೆಗಳನ್ನು ಧರಿಸಿಕೊಂಡು ಕೈಯಲ್ಲಿ ಒಂದು ಕೈ ಚೀಲ ಹಿಡಿದಿಕೊಂಡು ಬೈಲೂರು ಕ್ರಾಸ್ ಸಣ್ಣಬಲಸೆ  ಕ್ರಾಸ್ ಹೆದ್ದಾರಿ ಬದಿಯಲ್ಲಿ ಅಲೆಮಾರಿ ಭಿಕ್ಷುಕಿ ಹಾಗೂ ಮಾನಸಿಕ ಅಶ್ವಸ್ಥಳ ರೀತಿಯಲ್ಲಿ ತಿರುಗಾಡುತ್ತಿದ್ದಳು. ಆದರೆ ಅಪರಿಚಿತ ವಾಹನ ಚಾಲಕ ತನ್ನ ವಾಹನವನ್ನು ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಅತಿ ವೇಗ ಹಾಗು ಅಜಾಗರುಕತೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚಲಾಯಿಸಿಕೊಂಡು ಬಂದು ಅಪರಿಚಿತ ಮಹಿಳೆಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿದ್ದಾನೆ. ಈ ಅಪಘಾತದಲ್ಲಿ ಅಪರಿಚಿತ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ 
ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: