ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅತಿಕ್ರಮಣದಾರರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ವಿರುದ್ದ : ನಾಗರಿಕ ವೇದಿಕೆಯ ವತಿಯಿಂದ ಸುದ್ದಿಘೋಷ್ಟಿ

ಅತಿಕ್ರಮಣದಾರರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ವಿರುದ್ದ : ನಾಗರಿಕ ವೇದಿಕೆಯ ವತಿಯಿಂದ ಸುದ್ದಿಘೋಷ್ಟಿ

Wed, 18 May 2022 06:05:34  Office Staff   SO NEWS

ಭಟ್ಕಳ:ತಾಲೂಕಿನಾಧ್ಯಂತ ಬಡ ಅತಿಕ್ರಮಣದಾರರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದು ಕಾನೂನು ಬಾಹಿರವಾಗಿ ಬಡ ಅತಿಕ್ರಮಣದಾರರ ಮೇಲೆ  ಅರಣ್ಯ ಕಾನೂನಿನ ಹೆಸರಲ್ಲಿ ಕೆಸನ್ನು ಹಾಕಲಾಗುತ್ತಿದ್ದೆ ಇದು ನಿಲ್ಲಬೇಕು ಎಂದು ನಾಗರಿಕ ವೇದಿಕೆಯ ಗೌರವ ಅಧ್ಯಕ್ಷ ದತ್ತಾತ್ರಯ ನಾಯ್ಕ  ಹೇಳಿದರು 

ಅವರು ಮಂಗಳಾರ ಖಾಸಗಿ ಹೊಟೇಲ್ ಒಂದರಲ್ಲಿ ಕರೆದ ಸುದ್ದಿಗೊಷ್ಟಿಯಲ್ಲಿ ಮಾತನಾಡುತ್ತ  ಅರಣ್ಯ ಇಲಾಖೆ   ಅರಣ್ಯ ಕಾನೂನಿನ  ಹೆಸರಲ್ಲಿ  ಬಡ ಅರಣ್ಯ ಅತಿಕ್ರಮಣದಾರರ ಮೇಲೆ ದಬ್ಬಾಳಿಕೆ 
ನಡೆಸುತ್ತಿದೆ   ಇದು ತುಂಬ ಶೊಚನಿಯ ತಾಲೂಕಿನ ಹಾಡವಳಿಯಲ್ಲಿ ಒರ್ವ ಅತಿಕ್ರಮಣದಾರನ ಮೇಲೆ  ಅರಣ್ಯ ಕಾನೂನು ಸೆಕ್ಷನ್ 24 ಅಡಿಯಲ್ಲಿ  ಎಪ್ ಐ ಆರ್ ಮಾಡಿದ್ದು  ಈ ಬಗ್ಗೆ ಅತಿಕ್ರಣದಾರ ಹೈಕೊರ್ಟ ವಕೀಲರಾದ ದತ್ತಾತ್ರೇಯ ನಾಯ್ಕ ಅವರ ಮೂಲಕ ಹೈಕೊರ್ಟಲ್ಲಿ ಪ್ರಶ್ನಿಸಿದ್ದರು ಹೈಕೊರ್ಟ ಪ್ರಕರಣ ಪರಿಶೀಲಿಸಿ ಎಪ್ ಐ ಆತ್ ಅನ್ನು ರದ್ದು ಪಡಿಸಿದೆ‌.  ಅರಣ್ಯ ಇಲಾಖೆ ಜಿಲ್ಲೆಯಾಧ್ಯಂತ  ಇಂತಹ ಸಾವಿರಾರು   ಎಪ್ ಐ ಆರ್ ಗಳನ್ನು ಬಡ ಅಮಾಯಕ ಅರಣ್ಯ ಅತಿಕ್ರಮಣದಾರರ  ಮೇಲೆ ಮಾಡಿದೆ.  ಈ ಬಗ್ಗೆ ಜಿಲ್ಲೆ ತಾಲೂಕುಗಳು ಜನಪ್ರತಿನಿದಿ ಗಳೆನಿಸಿಕೊಂಡವರು ಚಕಾರ ಎತ್ತುತ್ತಿಲ್ಲಾ ಕಾರಣ ಅವರಿಗೆ ಅರಣ್ಯ ಕಾನೂನಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಾ ಈ ಬಗ್ಗೆ ತಿಳಿದುಕೊಂಡಾದರು ಜನಪ್ರತಿನಿದಿಗಳು ಬಡ ಅಮಾಯಕ ಅರಣ್ಯ ಅತಿಕ್ರಮಣದಾರರ ಬೆನ್ನಿಗೆ ನಿಲ್ಲುವಂತಾಗ ಬೇಕು ಅರಣ್ಯ ಇಲಾಖೆಯು ಅರಣ್ಯ ಅತಿಕ್ರಮಣದಾರರ ಮೇಲೆ ಹೀಗೆ ದಬ್ಬಾಳಿಕೆ ನಡೆಸುತ್ತಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ  ನಾಗರಿಕ ವೇದಿಕೆ ಉಗ್ರ ಹೊರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಪಾಸ್ಕಲ್ ಗೋಮ್ಸ , ಸಂದೀಪ್ ನಾಯ್ಕ ಮತ್ತಿತರರು ಉಪಸ್ತಿತರಿದ್ದರು


Share: