ಕಾರವಾರ : ಜೋಯಿಡಾ ತಾಲೂಕಿನ ಅಣಶಿ ಘಟ್ಟದಲ್ಲಿ ನಿರಂತರ ಗುಡ್ಡ ಕುಸಿತವಾಗುವ ಕಾರಣಕ್ಕೆ ರಾತ್ರಿ ಸಂಚಾರ ಬಂದ್ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶ ಮಾಡಿದ್ದಾರೆ.
ಅಣಿಶಿ ಘಟ್ಟದಲ್ಲಿ ಸಂಜೆ 7ಗಂಟೆಯಿಂದ ಬೆಳಗ್ಗೆ 7 ಘಂಟೆ ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಹೀಗಾಗಿ ಸದಾಶಿವಗಡ -ಲೋಂಡಾ ರಾಜ್ಯ ಹೆದ್ದಾರಿ- 34 ಬಂದ್ ಆಗಲಿದೆ.
ಕೆಲ ದಿನಗಳ ಹಿಂದೆ ಕೇಂದ್ರ ಭೂ ವಿಜ್ಞಾನಿಗಳ ತಂಡ ಈ ಮಾರ್ಗ ಪರಿಶೀಲನೆ ಮಾಡಿ ಅಪಾಯ ಎಂದು ವರದಿ ನೀಡಿತ್ತು. ಅಲ್ಲದೇ ಈ ಬಾರೀ ಮಳೆಗಾಲದಲ್ಲಿ ನಿರಂತರವಾಗಿ ಗುಡ್ಡ ಕುಸಿಯುತ್ತಿದೆ. ಹೀಗಾಗಿ ರಾತ್ರಿ ವೇಳೆ ಸಂಚಾರ ಸ್ಥಗಿತಗೊಳಿಸಲಾಗಿದೆ.