ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಣಶಿ ಅರಣ್ಯದಲ್ಲಿ ಯುವಕ ನಾಪತ್ತೆ.

ಅಣಶಿ ಅರಣ್ಯದಲ್ಲಿ ಯುವಕ ನಾಪತ್ತೆ.

Tue, 31 May 2022 04:13:52  Office Staff   SO News

ಜೋಯಿಡಾ :   ಪಾರ್ಟಿಗೆಂದು ತೆರಳಿದ್ದ ಯುವಕನೋರ್ವ  ನಾಪತ್ತೆಯಾದ  ಘಟನೆ   ಜೋಯಿಡಾದ ತಾಲೂಕಿನ ಅಣಶಿಯ ಕಾಪೋಯಿ ಬಳಿ ನಡೆದಿದೆ.

  ದಿಗಂಬರ ಮಡಿವಾಳ(23) ಕಾಣೆಯಾದ ದುರ್ದೈವಿ.  ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆಂದು ದಿಗಂಬರ್  ಭಾನುವಾರ ಹೋಗಿದ್ದ ಎನ್ನಲಾಗಿದೆ.  ಅರಣ್ಯ ಇಲಾಖೆ ನೇಚರ್ ಕ್ಯಾಂಪ್ ಬಳಿ  ಅರಣ್ಯ ಇಲಾಖೆಯ ಸ್ನೇಹಿತರೊಂದಿಗೆ ಊಟ ಮಾಡಿ ಬರುತ್ತೇನೆಂದು  ದಿಗಂಬರ ಮನೆಯಲ್ಲೂ ಹೇಳಿ ಹೋಗಿದ್ದನಂತೆ.  ಹಳ್ಳದಲ್ಲಿ ಈಜಲು ಇಳಿದಿದ್ದ ವೇಳೆ ನೀರಲ್ಲಿ ನಾಪತ್ತೆಯಾಗಿದ್ದಾನೆ.  ಈ ಸಂದರ್ಭದಲ್ಲಿ  ಗೆಳೆಯರು  ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.  

ಈ ಬಗ್ಗೆ ದಿಗಂಬರ್ ತಂದೆ   ತನ್ನ ಮಗನನ್ನ ಹುಡುಕಿಕೊಡುವಂತೆ  ಜೋಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


Share: