ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಕ್ರಮ ಪಡಿತರ ಅಕ್ಕಿ ದಾಸ್ತಾನು ಮೇಲೆ ಪೊಲೀಸರ ದಾಳಿ : 102 ಚೀಲ ಪಡಿತರ ಅಕ್ಕಿ ವಶ

ಅಕ್ರಮ ಪಡಿತರ ಅಕ್ಕಿ ದಾಸ್ತಾನು ಮೇಲೆ ಪೊಲೀಸರ ದಾಳಿ : 102 ಚೀಲ ಪಡಿತರ ಅಕ್ಕಿ ವಶ

Fri, 18 Aug 2023 07:11:51  Office Staff   SO News

ಭಟ್ಕಳ: ಖಚಿತ ಮಾಹಿತಿಯ ಮೇರೆಗೆ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಚಂದನ್ ಗೋಪಾಲ್ ಹಾಗೂ ಸಿಬ್ಬಂದಿಗಳು ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ವೆಂಕಟಾಪುರ ಗ್ರಾಮದ ಹೆಗ್ಗಲ್ ಎನ್ನುವಲ್ಲಿನ ಗೋಡೌನ್ ಒಂದರ ಮೇಲೆ ದಾಳಿ ನಡೆಸಿ ಸುಮಾರು 102 ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವೀಯಾಗಿದ್ದಾರೆ. 
ದಾಳಿನ ನಡೆಸಿದ ಇನ್ಸ್ಪೆಕ್ಟರ್ ಚಂದನ್ ಗೋಪಾಲ್ ಹಾಗೂ ಆಹಾರ ನಿರೀಕ್ಷಕ ಪಾಂಡು ನಾಯ್ಕ ಹಾಗೂ ಜಾಲಿ ಗ್ರಾಮ ಆಡಳಿತಾಧಿಕಾರಿ ಕೆ ಶಂಭು,ಗ್ರಾಮಸಹಾಯಕ ವಾಸು ಶೇಟಿ ಮತ್ತು ಗ್ರಾಮೀಣ ಠಾಣೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಗೋಡೌನ್‌ನಲ್ಲಿದ್ದ ಅಕ್ಕಿಯನ್ನು ಪತ್ತೆ ಹಚ್ಚಿದ್ದು ಅಕ್ಕಿಯೊಂದಿಗೆ ಆರೋಪಿಗಳಾದ ಗುಲಾಬ್ ಸಾಬ್, ಅಬ್ದುಲ್ ರೆಹಮಾನ್ ಹಾಗೂ ಇಮ್ತಿಯಾಜ್ ಎನ್ನುವವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವೀಯಾಗಿದ್ದಾರೆ. ವಶಪಡಿಸಿಕೊಂಡ ಅಕ್ಕಿಯು ಒಟ್ಟೂ ೫೦ ಕೆ.ಜಿ. ತೂಕದ 102 ಬ್ಯಾಗ್‌ಗಳು ಎಂದು ತಿಳಿಸಲಾಗಿದ್ದು ಇದರ ಮೂಲ ರೂವಾರಿ ನಿಶಾನ್ ಎನ್ನುವವನು ಎಲ್ಲಿಯವನು, ಎಲ್ಲಿಂದ ಅಕ್ಕಿಯನ್ನು ಇವರಿಗೆ ಸರಬರಾಜು ಮಾಡಲಾಗಿದೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ


Share: