ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಕ್ರಮ ಚಿರೆಕಲ್ಲು ಕ್ವಾರಿಮೇಲೆ ದಾಳಿ ಲಕ್ಷಾಂತರ ಮೌಲ್ಯದ ಪರಿಕರ ವಶ

ಅಕ್ರಮ ಚಿರೆಕಲ್ಲು ಕ್ವಾರಿಮೇಲೆ ದಾಳಿ ಲಕ್ಷಾಂತರ ಮೌಲ್ಯದ ಪರಿಕರ ವಶ

Wed, 06 Sep 2023 06:49:40  Office Staff   SO News

ಭಟ್ಕಳ:ಅಕ್ರಮವಾಗಿ ನಡೆಸುತ್ತಿರುವ ಚಿರೆಕಲ್ಲು ಕ್ವಾರಿ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ
ಅಧಿಕಾರಿಗಳು ದಾಳಿ ನಡೆಸಿ ಕಲ್ಲು ಕ್ವಾರಿ ಕೆಲಸಕ್ಕೆ ಬಳಸುವ 4 ಎಂಜಿನಗಳನ್ನು ವಶಕ್ಕೆ ಪಡೆದು ಮುರುಡೇಶ್ವ ಪೊಲೀಸ್ ಠಾಣೆಯ ವಶಕ್ಕೆ ನೀಡಿದ ಘಟನೆ ಭಟ್ಕಳ ತಾಲೂಕಿನ ಬೆಂಗ್ರೆ ಪಂಚಾಯತ 2 ರಲ್ಲಿ ನಡೆದಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಯಾದ ಆಶಾ ಎಂ.ಎಸ್. ನೇತೃತ್ವದಲ್ಲಿ,
ಭೂವಿಜ್ಞಾನಿಗಳಾದ ಹರೀಶ್ ಕೆ.ಎಸ್ ಮತ್ತು ಸುಬಾಷಚಂದ್ರ ಎಸ್ ಹಾಗೂ ಸಿಬ್ಬಂದಿಗಳು ಮತ್ತು ಕಂದಾಯ ನಿರೀಕ್ಷಕರಾದ ಶ್ರೀನಿವಾಸ ಆರ್ ಮಾಸ್ತಿ ಮತ್ತು ಗ್ರಾಮ ಆಡಳಿತಾಧಿಕಾರಿಗಳಾದ ಲತಾ ಎಸ್. ನಾಯ್ಕ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


Share: