ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಕ್ರಮವಾಗಿ ನಾಟ ಸಾಗಿಸುತ್ತಿದ್ದ ಲಾರಿ ವಶಕ್ಕೆ. ಚಾಲಕನ ಬಂಧನ.

ಅಕ್ರಮವಾಗಿ ನಾಟ ಸಾಗಿಸುತ್ತಿದ್ದ ಲಾರಿ ವಶಕ್ಕೆ. ಚಾಲಕನ ಬಂಧನ.

Fri, 08 Jul 2022 03:58:38  Office Staff   SO News

ಕಾರವಾರ :ಅಕ್ರಮವಾಗಿ ಕಟ್ಟಿಗೆ ಸಾಗಿಸುತ್ತಿದ್ದ ಲಾರಿಯನ್ನ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಕಾರವಾರ ತಾಲೂಕಿನ ಶಿರವಾಡದಲ್ಲಿ ಗುರುವಾರ ನಡೆದಿದೆ.

ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ಎರಡುವರೆ ಲಕ್ಷ ರೂಪಾಯಿ ಮೌಲ್ಯದ ಸಾಗುವಾನಿ, ಕಿಂದಳ, ಹೆದ್ದಿ ಮತ್ತು ಜಂಗ್ಲಿ ಜಾತಿಯ ನಾಟವನ್ನ ವಶಪಡಿಸಿಕೊಳ್ಳಲಾಗಿದೆ. ಕದ್ರಾದಿಂದ ಕಾರವಾರ ಕಡೆ ಲಾರಿಯಲ್ಲಿ ಅಕ್ರಮವಾಗಿ ನಾಟ ಸಾಗಿಸಲಾಗುತಿತ್ತು.

 ಮಾಹಿತಿ ಪಡೆದ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ ಮಾರ್ಗದರ್ಶನದಲ್ಲಿ ಎಸಿಎಫ್ ಜಯೇಶ, ಆರ್ ಏಪ್ ಓ ರಾಘವೇಂದ್ರ ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದ್ದರು. ಶಿರವಾಡ ಬಳಿ ಲಾರಿ ತಡೆದು ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅಕ್ರಮವಾಗಿ ನಾಟ ಇರೋದು ಪತ್ತೆಯಾಗಿದೆ. ಚಾಲಕ ದೇವಳಮಕ್ಕಿ ಮೂಲದ ಮೆಹಬೂಬ್ ಉಮರ್ ಶೇಖ್ ಎಂಬಾತನನ್ನ ಬಂಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ರೂಪಾ ತಾಮ್ಸೆ , ನವೀನ್ ಶೆಟ್ಟಿ, ಕೃಷ್ಣಾನಂದ ಗಾಂವ್ಕರ್ ಉಪ ವಲಯ ಅರಣ್ಯಾಧಿಕಾರಿಗಳು ,
ಗೋಪಾಲ ನಾಯ್ಕ, ಕರಿಬಸಪ್ಪ ಅರಣ್ಯ ರಕ್ಷಕರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.


Share: