ಭಟ್ಕಳ:ಅಕ್ರಮವಾಗಿ ಮ್ಯಾಂಗೋ ಫಾರ್ಮ್ ಹೌಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಗಾಂಜಾ ಸಮೇತ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಜಬೀವುಲ್ಲಾ ತಂದೆ ಮುಜಿಬಲ್ಲಾ ಶೇಕ್ ಬದ್ರಿಯಾ ಕಾಲೋನಿ ನಿವಾಸಿ ಎಂದು ತಿಳಿದು ಬಂದಿದೆ.
ಈತ ತಾಲೂಕಿನ ಮ್ಯಾಂಗೋ ಫಾರ್ಮ್ ಹೌಸ್ ಎದುರು ಪ್ಲಾಸ್ಟಿಕ್ ಕವರ್ ನಲ್ಲಿ ಸುಮಾರು 550 ಗ್ರಾಂ ತೂಕದ 15 ಸಾವಿರ ಮೌಲ್ಯದ ಒಣಗಿದ ಗಾಂಜಾವನ್ನು ಅಕ್ರಮವಾಗಿ ಇಟ್ಟುಕೊಂಡ ವೇಳೆ ಖಚಿತ ಮಾಹಿತಿ ಪಡೆದ ಡಿವೈಎಸ್ಪಿ ಶ್ರೀಕಾಂತ ಕೆ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಸಿ.ಪಿ.ಐ ಚಂದನ್ ಗೋಪಾಲ್, ಪಿ.ಎಸ್.ಐ ಶ್ರೀಧರ್ ನಾಯ್ಕ, ಹಾಗೂ ಇನ್ನೋರ್ವ ಪಿ.ಎಸ್.ಐ ಮಯೂರ ಪಟ್ಟಣ ಶೆಟ್ಟಿ ದಾಳಿ ನಡೆಸಿ ಆರೋಪಿ ಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಕಾರವಾರದ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮಂಜು ಗೊಂಡ ಹಾಗೂ ನಿಂಗನ ಗೌಡ ಪಾಟೀಲ್ ಉಪಸ್ಥಿತರಿದ್ದರು.
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ