ಭಟ್ಕಳ: ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಇಂದು ಅಂತಿಮ ವರ್ಷದ ಬಿ.ಎ., ಬಿಎಸ್ಸಿ., ಬಿ.ಕಾಂ., ಎಂ.ಎ., ಎಂ.ಕಾಂ ವಿದ್ಯಾರ್ಥಿಗಳಿಗಾಗೆ ಪದವಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ ಅಂಜುಮನ್ ಸಂಸ್ಥೆಯ ಅಧ್ಯಕ್ಷರೂ ಆದ ಜನಾಬ್ ಕಾಜಿಯಾ ಮೊಹಮ್ಮದ್ ಮುಜಮ್ಮಿಲ್ ಅವರು ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯಮತ್ತು ಸೇವೆಗಳೆಲ್ಲ ದೇಶ ಮತ್ತು ಸಮಾಜದ ಅಭಿವೃದ್ಧಿಗೆ ವಿನಿಯೋಗ ವಾದಾಗ ಪಡೆದ ಪದವಿ ಸಾರ್ಥಕವಾಗುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಜನಾಬ್ ಅಶ್ಫಾಖ್ ಸಾದಾ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತ ಪದವಿಧರ ವಿದ್ಯಾರ್ಥಿಗಳು ಎಲ್ಲ ಜಾತಿ ಮತ ಧರ್ಮದ ಎಲ್ಲೆಯನ್ನು ಮೀರಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಹುಟ್ಟಿದ ಊರು, ಕಲಿತ ಶಾಲಾ ಕಾಲೇಜುಗಳನ್ನು ಮರೆಯದಿರು ವಂತೆ ಸಲಹೆ ನೀಡಿದರು. ಮತ್ತೊಬ್ಬ ಮುಖ್ಯ ಅತಿಥಿ ಜನಾಬ್ ಇಸ್ಮೈಲ್ ಮುಸ್ಬಾ, ವಿದ್ಯಾರ್ಥಿಗಳ ನಿಜವಾದ ಜೀವನ ಆರಂಭವಾಗುವುದೇ ಪದವಿ ಮುಗಿದ ಮೇಲೆ. ಸಮಾಜದಲ್ಲಿ ನಾವು ಹೇಗೆ ಬದುಕುತ್ತೇವೆ, ವ್ಯವಹರಿಸುತ್ತೇವೆ ಎಂಬುದರ ಮೇಲೆ ನಾವೆಂಥ ಪದವಿಧರರು ಎಂಬುದು ಸಾಬೀತಾಗುತ್ತದೆ. ನಾವು ಪಡೆದ ಪದವಿಗೆ ಅವಮಾನವಾಗ ದಂತೆ ನೋಡಿ ಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಬಿ.ಎ. ಪದವಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ದಿಂದ ರ್ಯಾಂಕ್ ಪಡೆದ ವಿದ್ಯಾರ್ಥಿ ಶ್ರೇಯಸ್ ನಾಯಕನನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಎಲ್ಲ ವಿಭಾಗ ದಿಂದ ಅತ್ಯುತ್ತಮ ವಿದ್ಯಾರ್ಥಿಗಳನ್ನು, ಬೇರೆ ಬೇರೆ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು, ಕ್ರೀಡಾ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಬಹುಮಾನ ನೀಡಿ ಪ್ರೋತ್ಸಾಹಿ ಸಲಾಯಿತು. ಅಂತಿಮ ವರ್ಷದ ಎಲ್ಲ ವಿದ್ಯಾರ್ಥಿಗಳು ಪದವಿ ಪತ್ರ ಪಡೆದು ಸಂಭ್ರಮಿಸಿದರು. ವಿದ್ಯಾರ್ಥಿ ಮೊಹಿದ್ದೀನ್ ಅಸ್ಬಾ ಮತ್ತು ಪೂಜಾ ನಾಯ್ಕ ಅಂಜುಮನ್ ಕಾಲೇಜಿನಲ್ಲಿ ತಮಗೆ ದೊರೆತ ಸವಲತ್ತು ಮತ್ತು ಸಹಕಾರಗಳನ್ನು ಕುರಿತು ಮುಕ್ತ ಕಂಠ ದಿಂದ ಮೆಚ್ಚಿ ಮಾತನಾಡಿದರು.
ಆರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮುಸ್ತಾಕ್ ಶೇಖ ಸರ್ವರನ್ನು ಸ್ವಾಗತಿಸಿದರೆ, ಕೊನೆಯಲ್ಲಿ ಪ್ರೊ. ಗಾನಿಮ್ ವಂದಿಸಿದರು. ವೇದಿಕೆಯ ಮೇಲೆ ಅಂಜುಮನ್ ಸಂಸ್ಥೆಯ ಗೌರವಾನ್ವಿತ ಸದಸ್ಯರು, ಪ್ರೊ. ಹಿಬ್ಬಾನ್, ಪ್ರೊ. ಉಮೇಸ ಮೆಸ್ತಾ ಉಪಸ್ಥಿತರಿದ್ದರು. ಪ್ರೊ. ಸಾಜೀರ್ ಹುಸೇನ್ ಮತ್ತು ಡಾ.ವಿನಾಯಕ ಕಾಮತರ ಮಾರ್ಗ ದರ್ಶನದಲ್ಲಿ ಬಿ.ಕಾಂ.ಎರಡನೆಯ ವರ್ಷದ ವಿದ್ಯಾರ್ಥಿಗಳು ಅತ್ಯಂತ ಸೊಗಸಾಗಿ ಕಾರ್ಯಕ್ರಮ ನಿರೂಪಿಸಿದರು.