ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಂಕೋಲಾ : ಬೈಕ್ ಗೆ ಲಾರಿ ಢಿಕ್ಕಿ. ಸವಾರರಿಬ್ಬರು ಸ್ಥಳದಲ್ಲಿ ದುರ್ಮರಣ‌

ಅಂಕೋಲಾ : ಬೈಕ್ ಗೆ ಲಾರಿ ಢಿಕ್ಕಿ. ಸವಾರರಿಬ್ಬರು ಸ್ಥಳದಲ್ಲಿ ದುರ್ಮರಣ‌

Thu, 02 Jun 2022 04:27:05  Office Staff   SO News

ಅಂಕೋಲಾ: ಬೈಕ್ ಗೆ ಲಾರಿ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮವಾಗಿ   ಸವಾರಿಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ಅಂಕೋಲಾದ  ಬೊಗ್ರಿಬೈಲ್ ಸಮೀಪ ಸಂಭವಿಸಿದೆ.

ಬೊಮ್ಮಯ್ಯ ನಾಯಕ(70) ನಾರಾಯಣ ನಾಯಕ(50) ಮೃತ ದುರ್ದೈವಿಗಳಾಗಿದ್ದಾರೆ.
ಬೈಕ್ ಹಿಂಬದಿಗೆ ಲಾರಿ ಡಿಕ್ಕಿ ಹೊಡೆದಿದ್ದರಿಂದ   ಸವಾರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಸವಾರರು ಬರುತ್ತಿದ್ದರು. ಅಂಕೋಲಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Share: