ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಂಕೋಲಾ : ಗಂಗಾವಳಿ ನದಿಯಲ್ಲಿ ಮೂವರ ಸಾವು.

ಅಂಕೋಲಾ : ಗಂಗಾವಳಿ ನದಿಯಲ್ಲಿ ಮೂವರ ಸಾವು.

Mon, 25 Apr 2022 01:54:05  Office Staff   SO News

ಅಂಕೋಲಾ : ಕಪ್ಪೆ ಚಿಪ್ಪು ಆರಿಸಲು ಹೋಗಿದ್ದ   ಮೂವರು ಸಾವನ್ನಪ್ಪಿದ ಘಟನೆ  ಭಾನುವಾರ ಸಂಭವಿಸಿದೆ‌

 ಅಂಕೋಲಾ ತಾಲೂಕಿನ ಕರಿಕಲ್ ಕಡಕಾರ ಬಳಿಯ ಗಂಗಾವಳಿ ನದಿಯಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

ಅಂಕೋಲಾದ ಕಡಕಾರ ಮಜಿರೆ ನಿವಾಸಿ ಪೂಜಾ ಮಹೇಶ ನಾಯ್ಕ, ಕುಮಟಾ ತಾಲೂಕಿನ ಕೋನಳ್ಳಿಯ ದಿಲೀಪ ನಾಯ್ಕ, ಅಘನಾಶಿನಿ ಗ್ರಾಮದ ನಾಗೇಂದ್ರ ನಾಯ್ಕ ಮೃತ ದುರ್ದೈವಿಗಳಾಗಿದ್ದಾರೆ.

 ಪೂಜಾ ನಾಯ್ಕ ಪಿ.ಯು.ಸಿ ಓದುತ್ತಿದ್ದು ದಿಲೀಪ ಮತ್ತು ನಾಗೇಂದ್ರ ಆಕೆಯ ಸಂಬಂಧಿಕರೆಂದು ತಿಳಿದುಬಂದಿದೆ.
ಮೂವರ ಮೃತದೇಹ ಪತ್ತೆಯಾಗಿದ್ದು, 
 ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: