ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಂಕೋಲದಲ್ಲಿ ಬೈಕ್ ಮತ್ತು ಟ್ರಾಕ್ಸ್ ನಡುವೆ ಅಪಘಾತ. ಸವಾರ ಸಾವು. ಇಬ್ಬರು ಗಂಭೀರ.

ಅಂಕೋಲದಲ್ಲಿ ಬೈಕ್ ಮತ್ತು ಟ್ರಾಕ್ಸ್ ನಡುವೆ ಅಪಘಾತ. ಸವಾರ ಸಾವು. ಇಬ್ಬರು ಗಂಭೀರ.

Thu, 25 Apr 2024 04:01:05  Office Staff   SO News

ಅಂಕೋಲಾ :  ಬೈಕ್ ಮತ್ತು ಟ್ರಾಕ್ಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ  ಸಾವನ್ನಪ್ಪಿದ ಘಟನೆ ಅಕೋಲಾ ತಾಲೂಕಿನ  ಹಟ್ಟಿಕೇರಿ ಬ್ರಿಡ್ಜ್ ಸಮೀಪ ಬುಧವಾರ  ನಡೆದಿದೆ.

ಘಟನೆಯಲ್ಲಿ ಸುಮಂತ ಯಾದೋಬಾ ಹರಿಕಂತ್ರ (23) ಎಂಬಾತನೇ ಸ್ಥಳದಲ್ಲಿ ಸುಟ್ಟು ಕರಕಲಾಗಿ ಮೃತಪಟ್ಟಿದಾನೆ. ಬೈಕ್ ನಲ್ಲಿ ಕುಳಿತಿದ್ದ   ಹಾರವಾಡ ಸೀಬರ್ಡ್ ಕಾಲೋನಿಯ ಸುಮೀತ ರಾಮಚಂದ್ರ ಹರಿಕಂತ್ರ (22), ತರಂಗಮೇಟ್‍ದ ಚಾಣಕ್ಯ ರಾಮಚಂದ್ರ ಹರಿಕಂತ್ರ (23) ಗಂಬೀರ ಗಾಯಗೊಂಡಿದ್ದು,  ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಬೈಕ್ ಸವಾರರು ಬೆಳಂಬಾರದಲ್ಲಿ ಮಂಗಳವಾರ ರಾತ್ರಿ ನಡೆದ ಜಾತ್ರಾ ಉತ್ಸವ ಮುಗಿಸಿ ಬೈಕ್‍ನಲ್ಲಿ ಹಾರವಾಡಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಟ್ರಾಕ್ಸ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಈ ಅವಘಡ ನಡೆದಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: