ಗಾಂಧಿನಗರ (ಪಿಟಿಐ): ವಿದೇಶ ಪ್ರವಾಸದಿಂದ ವಾಪಸ್ಸಾದ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರು ಹಂದಿಜ್ವರದ ಲಕ್ಷಣಗಳಿಂದ ಬಳಲುತ್ತಿದ್ದಾರೆಂದು ವೈದ್ಯರು ಶುಕ್ರವಾರ ಇಲ್ಲಿ ತಿಳಿಸಿದ್ದಾರೆ.
ಗುರುವಾರ ಅವರ ಕಫದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಬಂದ ವರದಿಯು ಅವರಿಗೆ ಹಂದಿ ಜ್ವರ ಇರುವುದನ್ನು ಖಚಿತಪಡಿಸಿವೆ.
ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಈ ವಿಚಾರವನ್ನು ತಿಳಿಸಿದ್ದು, ಒಂದು ವಾರದ ಕಾಲ ಮೋದಿ ಅವರು ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಸೂಚಿಸಿದ್ದಾರೆ.