ಚಿಕ್ಕಮಗಳೂರು ಏಪ್ರಿಲ್ ೩೦ :- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾರ್ವಜನಿಕರ ಕೋರಿಕೆ ಮೇರೆಗೆ ಚಿಕ್ಕಮಗಳೂರಿನಿಂದ ಮಂಗಳೂರು ಮತ್ತು ಕುಂದಾಪುರದಿಂದ ಚಿಕ್ಕಮಗಳೂರಿಗೆ ನೂತನವಾಗಿ ವೇಗದೂತ ಸಾರಿಗೆ ಸಛಲಭ್ಯ ಕಲ್ಪಿಸಿದೆ.
ಚಿಕ್ಕಮಗಳೂರು-ಮಂಗಳೂರು ವೇಗದೂತ ಸಾರಿಗೆ ಬಸ್ ಬೆಳಿಗ್ಗೆ ೧೧.೩೦ಕ್ಕೆ ಚಿಕ್ಕಮಗಳೂರು ಬಿಟ್ಟು ಮೂಡಿಗೆರೆ, ಕೊಟ್ಟಿಗೆಹಾರ, ಉಜಿರೆ, ಬೆಳ್ತಂಗಡಿ, ಬಿ.ಸಿ ರೋಡ್ ಮಾರ್ಗವಾಗಿ ಮಂಗಳೂರನ್ನು ಸಂಜೆ ೪ ಗಂಟೆಗೆ ತಲುಪಲಿದೆ. ಸಂಜೆ ೪.೩೦ ಕ್ಕೆ ಮಂಗಳೂರುನಿಂದ ಹೊರಟು ಸದರಿ ಮರ್ಗವಾಗಿ ರಾತ್ರಿ ೯ ಗಂಟೆಗೆ ಚಿಕ್ಕಮಗಳೂರನ್ನು ತಲುಪಲಿದೆ.
ಕುಂದಾಪುರ-ಚಿಕ್ಕಮಗಳೂರು ವೇಗದೂತ ಸಾರಿಗೆ ಬಸ್ಸು ಕುಂದಾಪುರವನ್ನು ಬೆಳಿಗ್ಗೆ ೫.೩೦ಕ್ಕೆ ಬಿಟ್ಟು ಉಡುಪಿ- ಮಣಿಪಾಲ- ಕಾರ್ಕಳ- ಮೂಡಬಿದರೆ- ಗುರುವಾಯನಕರೆ -ಉಜಿರೆ- ಕೊಟ್ಟಿಗೆಹಾರ ಮಾರ್ಗವಾಗಿ ಚಿಕ್ಕಮಗಳೂರನ್ನು ೧೨ಗಂಟೆಗೆ ತಲುಪಲಿದೆ. ಇದೇ ರೀತಿ ಚಿಕ್ಕಮಗಳೂರಿನಿಂದ ಮದ್ಯಾಹ್ನ ೧೨.೪೫ಕ್ಕೆ ಹೊರಡಲಿದ್ದು ಸದರಿ ಮಾರ್ಗವಾಗಿ ಸಂಜೆ ೭ಗಂಟೆಗೆ ಕುಂದಾಪುರಕ್ಕೆ ತಲುಪಲಿದೆ.
ಸಾರ್ವಜನಿಕರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳುವಂತೆ ಕೆ.ಎಸ್.ಆರ್.ಟಿ.ಸಿ ಜಿಲ್ಲಾ ಘಟಕದ ಹಿರಿಯ ವ್ಯಸ್ಥಾಪಕರು ಪ್ರಕಟಣೆಯಲ್ಲಿ ಕೋರಿದ್ದಾರೆ.