ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಹೊಸದಿಲ್ಲಿ: ವಾಯುಪಡೆಯ ಮುಸ್ಲಿಂ ಸಿಬ್ಬಂದಿಗಳಿಗೆ ಗಡ್ಡ ಧಾರಣೆಗೆ ಅನುಮತಿ ನಿರಾಕರಣೆ ವಿವಾದ

ಹೊಸದಿಲ್ಲಿ: ವಾಯುಪಡೆಯ ಮುಸ್ಲಿಂ ಸಿಬ್ಬಂದಿಗಳಿಗೆ ಗಡ್ಡ ಧಾರಣೆಗೆ ಅನುಮತಿ ನಿರಾಕರಣೆ ವಿವಾದ

Wed, 21 Oct 2009 15:15:00  Office Staff   S.O. News Service

ಹೊಸದಿಲ್ಲಿ,ಅ.೨೦: ಭಾರತೀಯ ವಾಯು ಪಡೆಯ ಮುಸ್ಲಿಂ ಸಿಬ್ಬಂದಿಗಳು ಸೇವೆಗೆ ಸೇ ರ್ಪಡೆಗೊಂಡ ಬಳಿಕ ಅವರಿಗೆ ಗಡ್ಡವನ್ನು ಧರಿಸಲು ಅನುಮತಿ ನೀಡಬೇಕೇ ಎಂಬ ಬಗ್ಗೆ ಇನ್ನೂ ಯಾವುದೇ ನಿರ್ಧಾರಕ್ಕೆ ಬಾರದಿರುವುದಕ್ಕಾಗಿ ಸುಪ್ರೀಂಕೋರ್ಟ್ ಕೇಂದ್ರ ಸರ ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ತನ್ನ ಧಾರ್ಮಿಕ ಕಟ್ಟಳೆಯ ಅಂಗವಾಗಿ ತನಗೆ ಗಡ್ಡವನ್ನು ಧರಿಸಲು ಹಕ್ಕಿದೆಯೆಂಬ ವಾ ಯುಪಡೆಯ ಮುಸ್ಲಿಂ ಸಿಬ್ಬಂದಿಯೊಬ್ಬರ ವಾದದ ಬಗ್ಗೆ ತ್ವರಿತವಾಗಿ ಪರಿಶೀಲಿಸುವು ದಾಗಿ ಕೇಂದ್ರ ಸರಕಾರವು ಮೂರು ತಿಂಗಳ ಹಿಂದೆ ಸುಪ್ರೀಂಕೋರ್ಟ್‌ಗೆ ಭರವಸೆಯನ್ನು ನೀಡಿತ್ತು.

ಆದರೆ ಸೋಮವಾರ ನ್ಯಾಯಮೂರ್ತಿಗಳಾದ ಡಿ.ಕೆ. ಜೈನ್ ಹಾಗೂ ಎಚ್.ಎಲ್. ದತ್ತಾ ರನ್ನೊಳಗೊಂಡ ನ್ಯಾಯಪೀಠ ಮುಂದೆ ಮನವಿ ಮಾಡಿದ ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮೋಹನ್ ಜೈನ್ ಈ ವಿಷಯವು ಇನ್ನೂ ಕೇಂದ್ರದ ಪರಿಶೀಲನೆ ಯಲ್ಲಿರುವುದರಿಂದ ಪ್ರಕರಣದ ಆಲಿಕೆಯನ್ನು ನಾಲ್ಕು ವಾರಗಳ ತನಕ ಮುಂದೂಡಬೇ ಕೆಂದು ಕೋರಿದರು.

ಕೇಂದ್ರ ರಕ್ಷಣಾ ಸಚಿವಾಲಯದ ಸಹ ಕಾರ್ಯದರ್ಶಿಯವರು ಸೆಪ್ಟೆಂಬರ್ ೧,೨೦೦೯ರಲ್ಲಿ ಬರೆದ ಪತ್ರವೊಂದರಲ್ಲಿ ``ವಾಯುಪಡೆಯ ಮುಖ್ಯ ಕಾರ್ಯಾಲಯವು ಈ ವಿಷಯವನ್ನು ಸಕ್ರಿಯವಾಗಿ ಪರಿಶೀಲಿಸುತ್ತಿದೆ ಹಾಗೂ ಆ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳಲು ಕೆಲವು ಸಮಯ ತಗುಲಲಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವು ಮತ್ತೊಮ್ಮೆ ನ್ಯಾಯಾಲಯ ದ ಆಲಿಕೆಗೆ ಬಂದಾಗ ಆ ಬಗ್ಗೆ ಕ್ರಮವಾಗಿ ತಿಳಿಸಬೇಕು" ಎಂದು ಹೇಳಿರುವುದಕ್ಕೆ ನ್ಯಾಯ ಪೀಠವು ಅಸಮಾಧಾನ ಸೂಚಿಸಿತು.

ವಿಷಯದ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲು ಎಷ್ಟು ಸಮಯ ತಗಲಬಹುದೆಂದು ನಿಶ್ಚಿತ ವಾಗಿ ಪತ್ರದಲ್ಲಿ ಉಲ್ಲೇಖಿಸದಿರುವ ಬಗ್ಗೆ ಸುಪ್ರಿಂ ಕೋರ್ಟ್ ಕೇಂದ್ರ ಸರಕಾರವನ್ನು ತರಾ ಟೆಗೆ ತೆಗೆದುಕೊಂಡಿತು. ಆದರೆ ಸಾಲಿಸಿಟರ್ ಜನರಲ್ ಜೈನ್‌ರ ಮನವಿಯಂತೆ ನ್ಯಾ ಯಪೀಠವು ಕೇಂದ್ರಕ್ಕೆ ಮನವಿ ಮಾಡಿದೆ.


Share: