ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ /  ಬಾಂಬು ಬೆದರಿಕೆ ಪತ್ರ ರವಾನಿಸಿದ “ಪತ್ರಭಯೋತ್ಪಾದಕ” ಆರೋಪಿ ಪೊಲೀಸ್ ಕಸ್ಟಡಿಗೆ

 ಬಾಂಬು ಬೆದರಿಕೆ ಪತ್ರ ರವಾನಿಸಿದ “ಪತ್ರಭಯೋತ್ಪಾದಕ” ಆರೋಪಿ ಪೊಲೀಸ್ ಕಸ್ಟಡಿಗೆ

Sat, 14 Jan 2023 22:53:43  Office Staff   SOnews


ಭಟ್ಕಳ: ಇತ್ತಿಚೆಗೆ ಪೋಸ್ಟ್ ಕಾರ್ಡು ಮೂಲಕ ಬಾಂಬು ಹಾಕುವುದಾಗಿ ಬೆದರಿಕೆ ಪತ್ರ ರವಾನಿಸಿದ ಪತ್ರಭಯೋತ್ಪಾದಕ ಆರೋಪಿ ಬಳ್ಳಾರಿ ಹೊಸಪೇಟೆ ಮೂಲದ ಹನುಮಂತಪ್ಪ(೪೨) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ೪ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ವರದಿಯಾಗಿದೆ. 

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರದಂದು ಆರೋಪಿಯ ಆರೋಗ್ಯ ತಪಾಸಣೆ ನಡೆಸಿದ್ದು ಪೊಲೀಸ್ ಬಿಗು ಬಂದೋಬಸ್ತಿನಲ್ಲಿ ನ್ಯಾಯಾಲಕ್ಕೆ ಹಾಜರುಪಡಿಸಲಾಯಿತು. 

ಜ.೫ರಂದು ಪತ್ರದ ಮೂಲಕ ಬೆದರಿಕೆ ಒಡ್ಡಿದ ವ್ಯಕ್ತಿಯ ವಿರುದ್ಧ ದೂರನ್ನು ದಾಖಲಿಸಿಕೊಂಡಿದ್ದ ಭಟ್ಕಳ ಸಿ.ಪಿ.ಐ ದಿವಾಕರ್ ಪಿ.ಎಮ್, ಈ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದರು. ಪೋಸ್ಟ್ ಕಾರ್ಡಿನಲ್ಲಿ ಉರ್ದು ಮತ್ತು ಅಂಗ್ಲ ಭಾಷೆಯಲ್ಲಿ ಹ್ಯಾಪಿ ನ್ಯೂ ಇಯರ್ ೨೦೨೩ ಬ್ಲಾಸ್ಟ್ ಅಂತ ಬರೆದು ಕಾರ್ಡಿನ ವಿಳಾಸದಲ್ಲಿ ಆಂಗ್ಲ ಭಾಷೆಯಲ್ಲಿ ಭಟ್ಕಳ ಒನ್ ಪೊಲೀಸ್ ಸ್ಟೇಶನ್ ಮಂಗಳೂರು ಹೈವೆ ರೋಡ್ ಕರ್ನಾಟಕ ಎಂಬು ಬರೆಯಲಾಗಿತ್ತು. 

ಈ ಬರೆದ ಪೋಸ್ಟ್ ಕಾರ್ಡ್ ಧರ್ಮಸ್ಥಳದಿಂದ ಪೋಸ್ಟ್ ಮಾಡಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ. 
 


Share: