ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ನವದೆಹಲಿ:ಈಗ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆಯ ಬರೆ

ನವದೆಹಲಿ:ಈಗ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆಯ ಬರೆ

Sat, 13 Mar 2010 02:57:00  Office Staff   S.O. News Service

ಯುಪಿಎ-2 ಸರಕಾರ ಕೊನೆಗೂ ಪೆಟ್ರೋಲ್ಡೀಸೆಲ್ ಮತ್ತುತರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಮತ್ತೊಮ್ಮೆ ಏರಿಸಿಯೇ ಬಿಟ್ಟಿದೆಇತ್ತೀಚೆಗೆ ಅರೆಮನಸ್ಸಿನಿಂದಲಾದರೂ ಆಹಾರವಸ್ತುಗಳ ಬೆಲೆಯೇರಿಕೆ ಜನಸಾಮಾನ್ಯರನ್ನು ಬಹಳವಾಗಿ ತಟ್ಟಿದೆ ಎಂದು ಒಪ್ಪಿಕೊಂಡ ಸರಕಾರ ಬಜೆಟಿನಲ್ಲಿ ವಿಪರೀತ ಬೆಲೆಯೇರಿಕೆಹಣದುಬ್ಬರವನ್ನು ತಡೆಯಲು ಕ್ರಮಗಳನ್ನು ಪ್ರಕಟಿಸಬಹುದು ಎಂಬ ನಿರೀಕ್ಷೆಗೆ ತದ್ವಿರುದ್ಧವಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಬಕಾರಿ ಸುಂಕವನ್ನು ಮತ್ತು ಕಚ್ಚಾತೈಲದ ಮೇಲೆ ಸೀಮಾ ಸುಂಕವನ್ನು ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆದಿದೆಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ ರೂ.50.74ರಿಂದ 53.71ಕ್ಕೆ ಏರಿದರೆಡೀಸೆಲ್ ಬೆಲೆ ರೂ.37.06ರಿಂದ 39.87ಕ್ಕೆ ಏರಿದೆಕರ್ನಾಟಕ ರಾಜ್ಯದಲ್ಲಿ ಆಗಲೇ ಬಸ್ ಪ್ರಯಾಣ ದರಗಳು ಏರಿವೆ.

ಸಹಜವಾಗಿಯೆ ಪೆಟ್ರೋಲಿಯಂ ದರ ಏರಿಕೆಗೆ ಎಲ್ಲೆಡೆಗಳಿಂದ ವಿರೋಧ ವ್ಯಕ್ತವಾಗಿದೆ

 

ಸಂಸತ್ತಿನಲ್ಲಿ ಈ ಬಗ್ಗೆ ಕೋಲಾಹಲವೇ ಎದ್ದಿದೆಯುಪಿಎ-2 ರ ಅಂಗಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಮತ್ತು ಡಿಎಂ.ಕೆ.ಕೂಡಾ ವಿರೋಧಿಸಬೇಕಾಗಿ ಬಂದಿದೆಅವರು ಕೂಡ ಇದು ಹಣದುಬ್ಬರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆಮಮತಾ ಬ್ಯಾನರ್ಜಿ ಮತ್ತು ಕರುಣಾನಿಧಿಯವರು ಇದನ್ನು ಹಿಂತೆಗೆದುಕೊಳ್ಳಬೇಕು ಎಂದು ಸೋನಿಯಾ ಗಾಂಧಿ ಹಾಗೂ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆಅತ್ತ ಕಾಂಗ್ರೆಸ್ ಪಕ್ಷ ಬೆಲೆಯೇರಿಕೆಯಅದರಲ್ಲೂ ಆಹಾರವಸ್ತುಗಳ ಬೆಲೆಯೇರಿಕೆಯ ಹೊಣೆಯನ್ನು ಮಿತ್ರಪಕ್ಷಗಳ ಮೇಲೆ ಹಾಕಿದೆಒಂದು ಸಮ್ಮಿಶ್ರ ಸರಕಾರದಲ್ಲಿ ಸಂಯೋಜನೆಯಲ್ಲಿರುವ `ಕಷ್ಟಗಳು ಎಂದಿರುವ ಅದರ ಮುಖಪತ್ರಿಕೆ `ಕಾಂಗ್ರೆಸ್ ಸಂದೇಶ‘ ಪ್ರಧಾನ ಮಂತ್ರಿಗಳ ಕಚೇರಿ ಹಾಗೂ ವಿವಿಧ ಇಲಾಖೆಗಳ ನಡುವೆ ಸರಿಯಾದ ಸಂಪರ್ಕದ ಕೊರತೆ ಇದಕ್ಕೆ ಕಾರಣ ಎಂದು ಸಮಜಾಯಿಷಿ ಕೊಡಲು ಯತ್ನಿಸಿದೆಜತೆಗೇ ಜನರ ಭಾವನೆಗಳಿಗೆ ಸಂಬಂಧಪಟ್ಟ ಪ್ರಶ್ನೆಗಳ ಬಗ್ಗೆ ನಿಲರ್ಕ್ಷಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದೂ ಹೇಳಿದೆ.

ಆದರೆ ನಮ್ಮ ಆರ್ಥಿಕಜ್ಞ ಪ್ರಧಾನ ಮಂತ್ರಿಗಳು ಅಂತಹುದೇ ನಿರ್ಲಕ್ಷದ ಪ್ರದರ್ಶನ ನೀಡಿದ್ದಾರೆ

ಇವು ಹಣದುಬ್ಬರ ಹೆಚ್ಚಿಸುವ ತೆರಿಗೆಗಳು ಅಲ್ಲಹಣಕಾಸು ಕ್ರೋಡೀಕರಣದ `ದೂರಗಾಮಿ‘ ದೃಷ್ಟಿಯಿಂದ ಕೈಗೊಂಡ ಕ್ರಮಗಳು ಎಂದು ಸಮರ್ಥಿಸಿಕೊಳ್ಳುತ್ತಾಆದ್ದರಿಂದ (ಯಾರು ಎಷ್ಟೇ ಹೇಳಿದರೂಈ ಏರಿಕೆಗಳನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆಹಣಕಾಸು ಮಂತ್ರಿಗಳುಹಣಕಾಸು ಕಾರ್ಯದರ್ಶಿಗಳೂ ಸಹಜವಾಗಿಯೇ ಅದಕ್ಕೆ ದನಿಗೂಡಿಸಿದ್ದಾರೆಇದು ಜನಗಳ ಸಂಕಟಗಳನ್ನು ಮರೆತಿರುವ ನಿರ್ಲಕ್ಷ್ಯಪೂರ್ಣ ಸಮರ್ಥನೆ ಎಂದು ಸಿಪಿಐ(ಎಂಬಲವಾಗಿ ಖಂಡಿಸಿದೆಈ ತೆರಿಗೆ ಏರಿಕೆಗಳಿಂದ ಸರಕಾರ ಗಳಿಸುವುದು 25000 ಕೋಟಿ ರೂ.ಗಳುಆದರೆ ಇದೇ ಬಜೆಟಿನಲ್ಲಿ5ಲಕ್ಷರೂ.ಗಳಿಗಿಂತ ಹೆಚ್ಚು ವಾರ್ಷಿಕ ಆದಾಯದವರಿಗೆ ಆದಾಯ ತೆರಿಗೆ ದರಗಳನ್ನು ಇಳಿಸಿ 26000ಕೋಟಿ ರೂಆದಾಯವನ್ನು ಕಳಕೊಳ್ಳುತ್ತಿರುವುದು ಎಂತಹ `ದೂರಗಾಮೀ‘ ದೃಷ್ಟಿ ಎಂದು ಅದು ಪ್ರಶ್ನಿಸಿದೆಇದು ದೇಶದಲ್ಲಿ ಈಗ ಎಲ್ಲರೂ ಕೇಳುವ ಪ್ರಶ್ನೆ.

ಸೌಜನ್ಯ: ಜನಶಕ್ತಿ


Share: