ಮಂಜೇಶ್ವರ ಫೆಬ್ರವರಿ 19: ಮಂಗಳೂರಿನ ಗಣಿ ಹಾಗೂ ಭೂಗರ್ಭ ಇಲಾಖೆಯ ನಕಲಿ ಪಾಸ್ಗಳನ್ನು ಮುದ್ರಿಸಿ ಕರ್ನಾಟಕದಿಂದ ಕೇರಳಕ್ಕೆ ವ್ಯಾಪಕವಾಗ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಕರ್ನಾಟಕ ಪೋಲೀಸ್,ಗಣಿ ಭೂಗರ್ಭ ಇಲಾಖೆ ಮುಂದಾಗದೇ ಇರುವೂದು ವ್ಯಾಪಕ ಆಕ್ರೋಶಕ್ಕೆ ಎಡೆಮಾಡಿದೆ. ಮರಳು ಸಾಗಾಟದಲ್ಲಿ ಪ್ರಮುಖ ರಾಜಕೀಯ ಪಕ್ಷದ ನೇತಾರರು ಮಂಚೂಣಿಯಲ್ಲಿರೂವೂದಾಗಿ ಸ್ಥಳೀಯರಿಂದ ಕೇಳಿ ಬರುತ್ತಿದೆ. ಕರ್ನಾಟಕದಿಂದ ನಖಲಿ ಪಾಸ್ಗಳನ್ನು ಉಪಯೋಗಿಸಿ ತರುವ ಮರಳನ್ನು ಕೇರಳ ಗಡಿ ಪ್ರದೇಶವಾದ ವರ್ಕಾಡಿ ಪಂಚಾಯತ್ ವ್ಯಾಪ್ತಿಯ ತಲಕ್ಕಿ, ಬಾಕ್ರಬೈಲು, ಪಾತೂರು, ಕಜೆ ,ಪಾವೂರು ,ಧರ್ಮನಗರ ಮುಂತಾದೆಡೆಗಳಲ್ಲಿ ದಾಸ್ತಾನಿರಿಸಲಾಗಿದ್ದು. ಈ ಮರಳನ್ನು ಕೇರಳದ ವಿವಿಧೆಡಗಳಿಗೆ ಬೃಹತ್ ಲಾರಿಗಳಲ್ಲಿ ಸಾಗಿಸಲಾಗುತ್ತಿದೆ.
ಹೆಲ್ಮೆಟ್ ವಿಷಯದಲ್ಲಿ ಮಾತ್ರ ದ್ವಿಚಕ್ರ ವಾಹಣದ ಚಾಲಕರನ್ನು ಬೆನ್ನಟ್ಟುವ ಮಂಜೇಶ್ವರ ಪೋಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಲುತ್ತಿಲ್ಲವೆಂಬ ಆರೋಪ ಕೇಳಿಬರುತ್ತಿದೆ. ಈ ಹಿಂದೆ ಇದೇ ಮರಳು ಮಾಫಿಯಾ ಸುದ್ದಿವಾಹಿನಿಯೊಂದರ ಕ್ಯಾಮರಾಮಾನ್ ಮೇಲೆ ದರೋಡೆಗೈದು ಹಲ್ಲೆ ನಡೆಸಿತ್ತು. ಈ ಆರೋಪಿಗಳಲ್ಲಿ ಮಂಜೆಶ್ವರ ಪೋಲೀಸರು ಕೆಲವೊಂದು ಆರೋಪಿಗಳನ್ನು ಮಾತ್ರ ಬಂಧಿಸಿದ್ದು ಇತರ ಆರೋಪಿಗಳ ಬಂಧನಕ್ಕೆ ಮೀನ ಮೇಶ ಎನಿಸುತ್ತಿದೆ. ಅಕ್ರಮ ಮರಳು ಮಾಫಿಯಾಗಳು ವ್ಯಾಪಕವಾಗಿ ತಲೆ ಎತ್ತುದ್ದಿದ್ದು ಇದಕ್ಕೆ ಕಡಿವಾಣ ಹಾಕಲು ಸಂಭಂದಪಟ್ಟ ಇಲಾಖೆ ಮುಂದಾಗಬೇಕಿದ್ದು. ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಯಾವಾಗ ಎಂಬುದು ಜನ ಸಾಮಾನ್ಯರ ಪ್ರಶ್ನೆ ?
ಚಿತ್ರ, ವರದಿ: ಆರಿಫ್ ಮಚ್ಚಂಪಾಡಿ