ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಶಾಸಕರಿಂದ ಮತ್ತೊಮ್ಮೆ ಪತ್ರಿಕೋದ್ಯಮದ ಪಾಠ

ಭಟ್ಕಳ: ಶಾಸಕರಿಂದ ಮತ್ತೊಮ್ಮೆ ಪತ್ರಿಕೋದ್ಯಮದ ಪಾಠ

Thu, 12 Nov 2009 02:39:00  Office Staff   S.O. News Service
ಭಟ್ಕಳ, ನವೆಂಬರ್ 11: ಕೆಲವು ಪತ್ರಿಕೆಗಳು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡುಹುತ್ತಿದ್ದು, ಅವುಗಳು ತಮ್ಮ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಿದೆ ಎಂದು ಶಾಸಕ ಜೆ.ಡಿ.ನಾಯ್ಕ, ಸಚಿವ ಕಾಗೇರಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮತ್ತೊಮ್ಮೆ ಪತ್ರಿಕೋದ್ಯಮದ ಪಾಠವನ್ನು ಹೇಳಿದ ಘಟನೆ ನಡೆದಿದೆ.

ಸಚಿವರು ಪತ್ರಿಕಾಗೋಷ್ಠಿಯನ್ನು ಮುಗಿಸುತ್ತಿದ್ದಂತೆಯೇ, ಇತ್ತೀಚಿನ ಭಟ್ಕಳದ ಕೆಲವು ಘಟನೆಗಳ ಪತ್ರಿಕಾ ವರದಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ ಶಾಸಕರು, ಇದು ಇಲ್ಲಿಗೆ ನಿಲ್ಲಬೇಕು ಎಂದು ಹೇಳಿದರು. ಆದರೆ ಪತ್ರಿಕೆ ಹಾಗೂ ವರದಿ ಯಾವುದು ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ.


Share: