ಚಾರಿಟಿಗಾಗಿ ರೂಪು ತಳೆದು ತುಳು ಸಂಸ್ಕೃತಿಯನ್ನು ಬೆಳೆಸುವ ಉದ್ದೇಶಿತ ನಮ ತುಳುವೆರ್ ಯು.ಏ.ಇ.ಯಲ್ಲಿ ಪದಾಧಿಕರದ ಗೊಡವೆಯೇ ಇಲ್ಲ. ಇಲ್ಲಿ ಎಲ್ಲರೂ ಸಮಾನರೇ. ಎಲ್ಲಾ ಕೋಮು ಗಳ ಸಂಘಟಿತ ಸಂಸ್ಠೆಗಳ ಹಿರಿಯ ಪದಾಧಿಕಾರಿಗಳು, ನಾಯಕರಲ್ಲದೆ ವಿವಿಧ ವೃತ್ತಿ ರಂಗಗಳಿಂ ದ, ಕಲಾಕ್ಷೇತ್ರಗಳ ಪ್ರತಿನಿಧಿಗಳಿರುವ ಕಾರ್ಯಕಾರಿ ಸಮಿತಿಯಲ್ಲಿ ಜಾತಿ ಮತ ಭೇದಗಳಿಲ್ಲ. ಸಮಿತಿಯ ಸದಸ್ಯರು ತುಳುನಾಡಿನಿಂದ ಬಂದು ಯು.ಏ.ಇ.ಯಲ್ಲಿ ನೆಲೆಗೊಂಡವರು.
ನಾಡಿನ ಉದ್ದಗಲದಿಂದ ಸಂಸ್ಕೃತಿಗಾಗಿ...ಸೇವೆ ಸಲ್ಲಿಸುವ ಮಹೋನ್ನತ ಉದ್ದೇಶಕ್ಕಾಗಿ ಐವತ್ತೊಂದಕ್ಕೂ ಮಿಕ್ಕಿ ಸಹೃದಯಿಗಳು ಒಟ್ಟು ಸೇರಿದ್ದರು. "ರೇಡಿಯೊ ಸ್ಪೈಸ್" ಹಾಗೂ ದಾಯಿಜಿ ಮೀಡಿಯಾದ ಪ್ರತಿನಿಧಿಗಳೂ ಭಾಗವಹಿಸಿದರು.
" ತುಳು ಸಂಸ್ಕೃತಿಯ ವಿಶೇಷ ಒಲವು, ಸಹಾಯಾರ್ಥದ ನಿಲುವು" ಎಂಬುದು ಇದರ ಧ್ಯೇಯವಾಕ್ಯ. ನಿನ್ನೆಯ ದಿನ ನಡೆದ ಸಭೆಯಲ್ಲಿ ಇಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಚರ್ಚೆಯ ವಿಷಯಗಳನ್ನು ಪ್ರಸ್ತುತ ಪಡಿಸಲಾಯಿತು.
೧) ನಮ ತುಳುವೆರ್ ಬಗ್ಗೆ ಕಿರು ಪರಿಚಯ
೨) ಹಿಂದಿನ ಚಟುವಟಿಕೆಗಳ ವರದಿ, ಪತ್ರಿಕೆಗಳ ವರದಿ ಮತ್ತು ನೀಡಿದ ನೆರವಿನ ಸಚಿತ್ರ ಸಾಕ್ಷಿಗಳನ್ನು ಪ್ರಸ್ತುತ ಪಡಿಸಲಾಯಿತು.
೩) ಕಳೆದ ವರ್ಷ ಏನೂ ಚಟುವಟಿಕೆಗಳಿಲ್ಲದಿರುವ ಕಾರಣಗಳನ್ನು ಚರ್ಚಿಸಲಾಯಿತು.
೪) ಮುಂಬರುವ ಸಾಲಿನ ಯೋಜನೆಗಳು - ಸಹಾಯಾರ್ಥಕ್ಕಾಗಿ ಧನ ಸಂಗ್ರಹಣೆಯನ್ನು ನಿರ್ಧರಿಸಲಾಯಿತು.
೫) ತುರ್ತು ಪರಿಸ್ಠಿತಿಗಳಿಗೆ ಸ್ಪಂದಿಸುವ ಸಲುವಾಗಿ ನಮ ತುಳುವೆರ್ ದತ್ತ ನಿಧಿಯೊಂದನ್ನು ಪ್ರಾರಂಭಿಸುವ ಯೋಜನೆ
೬) ವಿಜಯ ಕುಮಾರ್ ಕೊಡಿಯಾಲ್ ಬೈಲ್ ಇವರ ಎರಡು ಹಾಸ್ಯ ನಾಟಕಗಳ ಪ್ರದರ್ಶನದ ಯೋಜನೆ...
೭) ನಾಟಕ ಪ್ರದರ್ಶನದ ಖರ್ಚು ವೆಚ್ಚಗಳು
೮) ಕಾರ್ಯಕಾರಿ ಜವಾಬ್ದಾರಿಗಳ ಸೂಕ್ತವಾದ ಹಂಚಿಕೆ
೯) ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಬೇಕಾಗುವ ಸಿದ್ಧತೆಗಳು
೧೦) ತುಳು ಬಾಂಧವರಿಗೆ ವಿಮಾ ಯೋಜನೆಯನ್ನು ಒದಗಿಸುವ ಸಲಹೆ
ಕಾಯವೈಖರಿಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಬಂದಂತ ಎಲ್ಲ ಸಲಹೆಗಳನ್ನು ತುಂಬು ಹೃದಯದಿಂದ ಸ್ವಾಗತಿಸಲಾಯಿತು.
ನಮ ತುಳುವೆರ್ ವತಿಯಿಂದ ಈ ಹಿಂದೆ ಸಾನಿಧ್ಯ ಸ್ಪೆಶಲ್ ನೀಡ್ಸ್ ಸ್ಕೂಲ್ ಮಂಗಳೂರು ಇವರಿಗೆ ಸಹಾಯವನ್ನು ಒದಗಿಸಲಾಗಿತ್ತು. ಅಪಘಾತಕ್ಕೊಳಗಾದ ಮಂಗಳೂರಿನ ರಶೀದಾ ಫಾರುಕ್ ಇವರಿಗೆ ನೆರವನ್ನು ನೀಡಲಾಗಿತ್ತು. ಎರಡುವರೆ ವರ್ಷದ ಅನುಶ್ ಇವರಿಗೂ ಸಹಾಯ ಧನವನ್ನು ನೀಡಲಾಗಿತ್ತು.
ಧನ ಸಂಗ್ರಹಣೆಗಾಗಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಇವರ ಎರಡು ನಾಟಕಗಳನ್ನು ಅಕ್ಟೋಬರ್ ಒಂದರಂದು ಪ್ರದಶನಕ್ಕೇರ್ಪಡಿಸುವುದೆಂದು ನಿರ್ಧರಿಸಲಾಯಿತು. ಇದೇ ಸಂದರ್ಭ ದಲ್ಲಿ ಅವರ ನೂತನ ಕಾಸೆಟ್ಟುಗಳನ್ನು ಲೋಕಾರ್ಪಣೆಗೈ ಯುವುದೆಂದೂ ನಿರ್ಧರಿಸ ಲಾಯಿತು.
ಎಲ್ಲರ ಒಮ್ಮತದಿಂದ, ಸಂಗ್ರಹವಾದ ಧನವನ್ನು ಸಾನಿಧ್ಯ ಸ್ಪೆಶಲ್ ನೀಡ್ಸ್ ಸ್ಕೂಲ್ ಮಂಗಳೂರು, ಅರುಣೋದಯ ಸ್ಪೆಶಲ್ ನೀಡ್ಸ್ ಸ್ಕೂಲ್, ಕಾರ್ಕಳ ಮತ್ತು ನಮ ತುಳುವೆರ್ ದತ್ತಿ ನಿಧಿಗೆ ಯು ಏ ಇ ಯಲ್ಲಿರುವ ತುಳುವರ ಸಹಾಯಕ್ಕಾಗಿ ಸಮಾನವಾಗಿ ಹಂಚುವುದೆಂದು ನಿರ್ಧರಿಸಲಾಯಿತು.
ಪೂರ್ವ ನಿಯೋಜಿತ ಸದುದ್ದೇಶಗಳನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ಯೋಜನೆಯನ್ನು ರೂಪಿಸಿದ್ದಲ್ಲದೆ ಕನಸನ್ನು ನನಸಾಗಿಸಲು ಟೊಂಕ ಕಟ್ಟಿದ ಎಲ್ಲಾ ಸದಸ್ಯರಿಗೆ ನಮ ತುಳುವೆರ್ ಧನ್ಯವಾದ ಸಮರ್ಪಿಸಿತು.
ವರದಿಗಾರರು : ಗೋಪಿಕ ಮಯ್ಯ
ಸೌಜನ್ಯ: ಗಲ್ಫ್ ಕನ್ನಡಿಗ