ಬಂಟ್ವಾಳ :ಮೈರಾನ್ಪಾದೆ ಕಾಮಾಜೆ ನವೋದಯ ಯುವಕ ಸಂಘದ ನೂತನ ಕಚೇರಿಯನ್ನು ಭಾನುವಾರ ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಸ್ವಾಮೀಜಿ ಉದ್ಘಾಟಿಸಿದರು. ಸಂಘಟನೆಗಳು ರಚನಾತ್ಮಕ ಚಟುವಟಿಕೆಗಳೊಂದಿಗೆ ಸಾಮಾಜಿಕ ಪ್ರಗತಿಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಅವರು ಹೇಳಿದರು.
ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಗಳ ಮೂಲಕ ಯುವ ಸಮುದಾಯ ಸತ್ಚಿಂತನೆಯೊಂದಿಗೆ ಉನ್ನತ ಮಾರ್ಗದಲ್ಲಿ ನಡೆದಾಗ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಉದ್ಯಮಿಗಳಾದ ಕೆ.ಸೇಸಪ್ಪ ಕೋಟ್ಯಾನ್, ಬಿ.ಕೃಷ್ಣಪ್ಪ, ಪ್ರಮೋದ್ ಕುಮಾರ್, ಬಂಟ್ವಾಳ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸತೀಶ್ ಎಸ್ ಕುಮಾರ್, ಪುರಸಭ ಸದಸ್ಯ ಭಾಸ್ಕರ ಟೈಲರ್ ಅತಿಥಿಗಳಾಗಿ ಭಾಗವಹಿಸಿದರು.
ಸಂಘದ ಅಧ್ಯಕ್ಷ ಮಂಜುನಾಥ ಕಾಮಾಜೆ, ಕಾರ್ಯದರ್ಶಿ ಜೀವನ್ ರಾಜ್ ಮೈರಾನ್ ಪಾದೆ ಉಪಸ್ಥಿತರಿದ್ದರು. ಪ್ರೇಮ್ ರಾಜ್ ಸ್ವಾಗತಿಸಿದರು. ರಿತೇಶ್ ಪ್ರಸ್ತಾಪಿಸಿದರು. ನಾರಾಯಣ ವಂದಿಸಿದರು. ಎಚ್ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ಸಂಘದ ೨೦ನೇ ವಾರ್ಷಿಕೋತ್ಸವ, ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.