ಭಟ್ಕಳ, ಮಾರ್ಚ್ ೪: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಶನ್ ಆಫ್ ಇಂಡಿಯಾ ಭಟ್ಕಳ ಶಾಖೆಯು ಶುಕ್ರವಾದಿಂದ ಮೂರು ದಿನಗಳ ಕಾಲ ನUರದಲ್ಲಿ ಸಾಲ್ವೇಶನ್(ಮುಕ್ತಿ) ಅಂಧಕಾರ ದಿಂದ ಪ್ರಕಾಶದೆಡೆಗೆ ಎಂಬ ಶೀರ್ಷಿಕೆಯೊಂದಿಗೆ ವಸ್ತು ಪ್ರದರ್ಶನ ಹಾಗಾ ಸಮ್ಮೇಳನವನ್ನು ಅಯೋಜಿದೆ ಎಂದು ಎಸ್.ಐ.ಓ ಪಶ್ಚಿಮ ವಲಯ ಅಧ್ಯಕ್ಷ ಅಶ್ಫಾಖ್ ಆಹಮದ್ ಷರೀಫ್ ತಿಳಿಸಿದರು. ಅವರು ಗುರುವಾರದಂದು ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ಜರುಗಿದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
ಮಾರ್ಚ ೫ರಿಂದ ೭ರ ವರೆಗೆ ಮೂರು ದಿನಗಳ ವಸ್ತು ಪ್ರದರ್ಶನ ಹಾಗೂ ಸಮ್ಮೇಳನವನ್ನು ಆಯೋಜಿಸಿದ್ದು ಇದರ ಉದ್ದೇಶ ಮಾನವ ಹಕ್ಕುಗಳ ರಕ್ಷಣೆ, ನ್ಯಾಯದ ಮರುಸ್ಥಾಪನೆ, ನೈತಿಕ ಮೌಲ್ಯಗಳು, ಮನಸ್ಸಿನಲ್ಲಿ ಶಾಂತಿ ನೆಮ್ಮದಿ, ದೇಶದ ಭದ್ರತೆ, ನಮ್ಮ ವೈಯಕ್ತಿಕ ಹಾಗೂ ಸಾಮೂಹಿಕ ಮಟ್ಟದಲ್ಲಿ ನೈಜ ಮಾನವ ಕಳಕಳಿ ಹಾಗೂ ಐಕ್ಯತೆಯನ್ನು ಮೂಡಿಸುವುದಾಗಿರುತ್ತದೆ ಎಂದು ಹೇಳಿದ ಅವರು ಮೂರುದಿನಗಳಲ್ಲಿ ಜರುಗುವ ಈ ಕಾರ್ಯಕ್ರಮದಲ್ಲಿ ವಸ್ತುಪ್ರದರ್ಶನವು ವಿಶೇಷ ಆಕರ್ಷಣೆಯಾಗಿದ್ದು ಇದರಲ್ಲಿ ವಿವಿಧ ಮಾದರಿಗಳ ಮೂಲಕ ಸಮಾಜದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಚಾರ, ವರದಕ್ಷಿಣೆ, ಅಶ್ಲೀಲತೆ, ವೈಭಿಚಾರ, ಹೆಣ್ಣು ಭ್ರೂಣ ಹತ್ಯೆ, ಕೋಮುವಾದ ಡೊನೆಶನ್ ಹಾವಳಿ ಕುರಿತಾದ ಅನೇಕಾ ಸಮಾಜ ಕಂಠಕ ಸಮಸ್ಯೆಗಳ ಕುರಿತು ಮಾದರಿಗಳ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತದೆ. ಅಲ್ಲದೆ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಬುದ್ದಿಜೀವಿಗಳಿಂದ ವಿಚಾರ ಮಂಡನೆ ನಡೆಯಲಿದೆ.
ಶುಕ್ರವಾರ ಸಂಜೆ ೫ಗಂಟೆಗೆ ವಸ್ತುಪ್ರದರ್ಶನದ ಉದ್ಘಾಟನ ಸಮಾರಂಭವು ನೆರವೇರಲಿದ್ದು ಎಸ್.ಐ.ಓ ಕರ್ನಾಟಕ ಘಟಕದ ಅಧ್ಯಕ್ಷ ಶೌಕತ್ ಅಲಿ ಕೆ. ಉದ್ಘಾಟಿಸಲಿರುವರು. ಪೀಸ್ ಟಿ.ವಿ. ಉರ್ದು ವಿನ ವಾಕ್ಪಟು ಶೇಖ್ ಸನಾವುಲ್ಲಾ ಮದನಿ ಎಸ್.ಐ.ಓ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಅಝ್ಹರುದ್ದೀನ್ ಭಾಗವಹಿಸುತ್ತಿದ್ದು ಅಧ್ಯಕ್ಷತೆಯನ್ನು ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ&ಗೋವಾ ಘಟಕದ ಪ್ರಧಾನ ಕಾರ್ಯದರ್ಶಿ ಅಥರುಲ್ಲಾ ಷರೀಫ್ ವಹಿಸುವರು.
ಮಹಿಳೆಯರಿಗಾಗಿಯೇ ಪ್ರತ್ಯೇಕ ಸಮ್ಮೇಳನವನ್ನು ಮಾ.೬ ಕ್ಕೆ ಆಯೋಜಿಸಿದ್ದು ಜಮಾತೆ ಇಸ್ಲಾಮಿ ಹಿಂದ್ ನ ರಾಜ್ಯ ಮಹಿಳಾ ಘಟಕದ ಸಂಚಾಲಕಿ ಅಮತುರ್ರಝಾಖ್ ಭಾಗವಹಿಸಲಿದ್ದಾರೆ.
ಮಾರ್ಚ೭, ಭಾನುವಾರ ದಂದು ಸಂಜೆ ೪-೩೦ಕ್ಕೆ ಸಮಾರೂಪ ಸಮಾರಂಭ ನಡೆಯಲಿದ್ದು ಇದರಲ್ಲಿ ರಾಮಕ್ಷೇತ್ರ ಧರ್ಮಸ್ಥಳದ ಸ್ವಾಮಿಗಳಾದ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಗಳು ಹಾಗೂ ಇಲಕಲ್ಲಿನ ಲಾಲ್ ಹುಸೇನ್ ಕಂದಗಲ್ ಭಾಗವಹಿಸುತ್ತಿದ್ದು ಅಧ್ಯಕ್ಷತೆಯನ್ನು ಎಸ್.ಐ.ಓ ರಾಜ್ಯಘಟಕದ ಅಧ್ಯಕ್ಷ ಶೌಕತ್ ಅಲಿ ಕೆ. ವಹಿಸುವರು.
ಈ ಮೂರು ದಿನಗಳು ನಡೆಯುವ ಎಲ್ಲ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದೂಪಯೋಗವನ್ನು ಪಡೆದುಕೊಳ್ಳುವಂತೆ ಅವರು ಮನವಿಯನ್ನು ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಎಸ್.ಐ.ಓ ಪಶ್ಚಿಮ ವಲಯ ಅಧ್ಯಕ್ಷ ಅಶ್ಫಾಖ್ ಆಹಮದ್ ಷರೀಫ್ ಕಾಯದರ್ಶಿ ನಿಸಾರ್ ಮಂಗಳೂರು, ಉತ್ತರ ಕನ್ನಡ ಜಿಲ್ಲಾ ಸಂಚಾಲಕರು ಸೈಯ್ಯದ್ ಖುತುಬ್ ಬರ್ಮಾವರ್ ಭಟ್ಕ ಶಾಖೆಯ ಅಧ್ಯಕ್ಷ ನಸೀಫ್ ಇಕ್ಕೇರಿ ಹಾಗೂ ಸಮ್ಮೇಳನ ಸಂಚಾಲಕ ಅಬ್ದುಲ್ ತವ್ವಾಬ್ ಉಪಸ್ಥಿತರಿದ್ದರು.