ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ಕೆ.ಎಸ್. ಈಶ್ವರಪ್ಪ - ನಾಳೆ ಸಚಿವಸ್ಥಾನಕ್ಕೆ ರಾಜೀನಾಮೆ

ಬೆಂಗಳೂರು: ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ಕೆ.ಎಸ್. ಈಶ್ವರಪ್ಪ - ನಾಳೆ ಸಚಿವಸ್ಥಾನಕ್ಕೆ ರಾಜೀನಾಮೆ

Wed, 27 Jan 2010 18:07:00  Office Staff   S.O. News Service
ಬೆಂಗಳೂರು, ಜನವರಿ 27:  ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಲಿರುವ ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ನಾಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.  ಈ ತಿಂಗಳ ೩೦ ರಂದು ನಡೆಯಲಿರುವ ಬಿಜೆಪಿ ಅಧ್ಯಕ್ಷರ ಚುನಾವಣೆಗೆ ಕೆ.ಎಸ್. ಈಶ್ವರಪ್ಪ ಸಚಿವ ಪದವಿಗೆ ರಾಜೀನಾಮೆ ನೀಡಿದ ನಂತರ ನಾಮಪತ್ರ ಸಲ್ಲಿಸಲಿದ್ದಾರೆ.  

ನಾಳೆ ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ರಾಜೀನಾಮೆ ನೀಡುವ ಕೆ.ಎಸ್. ಈಶ್ವರಪ್ಪ ನಂತರ ಅಲ್ಲಿಂದ ನೇರವಾಗಿ ಪಕ್ಷದ ಕಚೇರಿಗೆ ತೆರಳಿ ಬಿಜೆಪಿಯ ಸಾಂಸ್ಥಿಕ ಚುನಾವಣಾಧಿಕಾರಿ ಕೆ.ಎಚ್. ಶಿವಯೋಗಿಸ್ವಾಮಿಯವರಿಗೆ ಅಧ್ಯಕ್ಷ ಹುದ್ದೆಯ ನಾಮಪತ್ರ ಸಲ್ಲಿಸಲಿದ್ದಾರೆ. 

ಅವಿರೋಧ ಆಯ್ಕೆ

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೆಸರನ್ನು ಮಾತ್ರ ಸಮನ್ವಯ ಸಮಿತಿ ಸಭೆಯಲ್ಲಿ ಅಂತಿಮಗೊಳಿಸಿರುವುದಿರಿಂದ ಇವರ ಆಯ್ಕೆ ಅವಿರೋಧವಾಗಿ ಆಗಲಿದೆ. 

ಗಡ್ಕರಿ ಹಾಜರು 
ನಾಳೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲಿರುವ ಕೆ.ಎಸ್. ಈಶ್ವರಪ್ಪ ಈ ತಿಂಗಳ ೩೦ ರಂದು ಅಧಿಕಾರ ಸ್ವೀಕರಿಸಲಿದ್ದು, ಈ ಪದಗ್ರಹಣ ಸಮಾರಂಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಭಾಗವಹಿಸಲಿದ್ದಾರೆ. 

ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಯಿಂದ ತೆರವಾಗಲಿದರುವ ಸಚಿವ ಸ್ಥಾನಕ್ಕೆ ಬಿಜೆಪಿಯಲ್ಲಿ ಭಾರಿ ಪೈಪೋಟಿಯೇ ನಡೆದಿದೆ.  

ಮಾಜಿ ಸಚಿವೆ ಶೋಭಕರಂದ್ಲಾಜೆ, ಎ. ನಾರಾಯಣಸ್ವಾಮಿ, ಸಿ.ಟಿ ರವಿ, ಶಂಕರಲಿಂಗೇಗೌಡ, ಜೆ. ರಾಮದಾಸ್ ಸಚಿವ ಪದವಿ ಆಕಾಂಕ್ಷಿಗಳಾಗಿದ್ದು, ಸಚಿವಗಿರಿಗೆ ಭಾರಿ ಲಾಬಿ ನಡೆಸುತ್ತಿದ್ದಾರೆ. 

ಸಚಿವ ಸಂಪುಟ ವಿಸ್ತರಣೆ ಸಾಧ್ಯವಿಲ್ಲ

ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಯಿಂದ ತೆರವಾಗಲಿರುವ ಸಚಿವ ಸ್ಥಾನವನ್ನು ಸದ್ಯಕ್ಕೆ ಭರ್ತಿ ಮಾಡದಿರಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದು, ಸಚಿವ ಸಂಪುಟ ವಿಸ್ತರಣೆಯೇನಿದ್ದರೂ ಮುಂದಿನ ಬಜೆಟ್ ಮಂಡನೆ ನಂತರವೇ ಎಂದು ಅವರ ಆಪ್ತ ಮೂಲಗಳು ಹೇಳಿವೆ. 


Share: