ಬಂಟ್ವಾಳ, ನವೆಂಬರ್ 23: ಗುಂಡು ಹಾರಿಸಿ ಪುರಸಭಾ ಸದಸ್ಯರೋರ್ವರನ್ನು ಬೆದರಿಸಿರುವ ಆರೋಪದ ಮೇಲೆ ಸ್ವರ್ಣೋದ್ಯಮಿ ಸುರೇಶ್ ಬಾಳಿಗಾರಿಗಾಗಿ ಪೋಲಿಸರು ತೀವ್ರಶೋಧ ನಡೆಸುತ್ತಿದ್ದಾರೆ. ಸೋಮವಾರ ಬಂಟ್ವಾಳ ಪೇಟೆಯಲ್ಲಿರುವ ಸುರೇಶ ಬಾಳಿಗಾ ಜ್ಯುವೆಲ್ಲರ್ಸ ಹಾಗೂ ಅವರ ಮನೆಗೆ ಪೋಲಿಸರು ದೀಡೀರ್ ದಾಳಿ ನಡೆಸಿ ದ್ದರೂ ಆರೋಪಿ ಸುರೇಶ್ ಬಾಳಿಗಾ ಪತ್ತೆಯಾಗಿಲ್ಲ ಎಂದು ಪೋಲಿಸರು ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಬಾಳಿಗಾ ಕುಟುಂಬಿಕರಿಂದ ಮಾಹಿತಿ ಪಡೆದಿರುವ ಪೋಲಿಸರು ಇದೀಗ ಆಸ್ಪತ್ರೆಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆತ್ಮ ರಕ್ಷಣೆಗೆಂದು ನೀಡಿರುವ ರಿವಾಲ್ವರ್ ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಆರೋಪಿ ಸುರೇಶ್ ಬಾಳಿಗಾರನ್ನು ಶೀಘ್ರ ಬಂಧಿಸುವುದಾಗಿ ವೃತ್ತ ನಿರೀಕ್ಷಕ ನಂಜುಂಡೇ ಗೌಡ ತಿಳಿಸಿದ್ದಾರೆ.