ಮಂಗಳೂರು, ಫೆಬ್ರವರಿ 1:ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ’ಹಾಂಗ್ಯೋ ಶಾಪಿ’ಯ ಉದ್ಗಾಟನೆಯನ್ನು ಸ್ಥಳೀಯ ಶಾಸಕ ಶ್ರೀ ಯು.ಟಿ.ಖಾದರ ನೇರವೇರಿಸಿದರು.
ಸಾಮಾನ್ಯ ಜನರಿಗೂ ಐಸಕ್ರೀಮನ ಸವಿಯನ್ನು ತಲುಪಿಸಿದ ಕೀರ್ತಿ ಹಾಂಗ್ಯೋಗೆ ಸಲ್ಲುತ್ತದೆ ಎಂದು ಅವರು ಈ ಸಮಯದಲ್ಲಿ ಹೇಳಿದರು. ಒಂದೇ ಸೂರಿನಡಿ ’ಶ್ರೀಕೃಷ್ಣಾ’ ಬ್ರಾಂಡನ ಹಾಲಿನ ಉತ್ಪನ್ನಗಳು ಹಾಗೂ ’ಹಾಂಗ್ಯೋ’ ಬ್ರಾಂಡನ ಐಸಕ್ರೀಮಗಳು ಲಭ್ಯವಿರುವ ’ಹಾಂಗ್ಯೋ ಶಾಪಿ’ ಮುಂದಿನ ದಿನಗಳಲ್ಲಿ ಜನಮನ ಗೆಲ್ಲಲಿ ಎಂದು ಅವರು ಹಾರೈಸಿದರು.
ಮಿಲಾಗ್ರಿಸ ಚರ್ಚಿನ ಫಾದರ ವಾಲ್ಟರ ಡಿಮೇಲ್ಲೊ ಅವರು ಆಶೀರ್ವದಿಸಿದರು. ಏಕ್ಸಿಸ ಬ್ಯಾಂಕನ ಉಪಾಧ್ಯಕ್ಷ ಶ್ರೀ ಗ್ರೇಗರಿ ಫೆರ್ನಾಂಡೀಸ ಶುಭವನ್ನು ಕೋರಿದರು. ಪ್ರಥಮ ’ಹಾಂಗ್ಯೋ ಶಾಪಿ’ಯ ಫ್ರಾಂಚೈಸಿ ಬೆನ್ನೀಸ ಸಂಸ್ಥೆಯ ಶ್ರೀ ಗೋಡ್ರೀಕ ಲೋಬೊ, ಶ್ರೀಮತಿ ಲೂಯಿಸಾ ಬೆನ್ನಿ, ಜೀನ ಲೋಬೊ, ಅದೀತ ಲೋಬೊ ಅಲ್ಲದೇ ಹಾಂಗ್ಯೋ ಸಂಸ್ಥೆಯ ಶ್ರೀ ಪ್ರದೀಪ ಜಿ. ಪೈ, ಜಗದೀಶ ಪೈ, ಸತೀಷ ಪೈ ಹಾಗೂ ಶ್ರೀ ಟಿ.ಡಿ.ಪೈ ಉಪಸ್ಥಿತರಿದ್ದರು. ಶ್ರೀಕೃಷ್ಣಾ ಹಾಲು ಹಾಗೂ ಉತ್ಪನ್ನಗಳಾದ ಬೆಣ್ಣೆ, ಮೊಸರು, ಲಸ್ಸಿ, ಮಜ್ಜಿಗೆ, ಪಾಟಕರ್ಡ, ಕೋಲ್ಡ ಕಾಫಿ, ಮ್ಯಾಂಗೊ ಲಸ್ಸಿ, ಜೀರಾ ಚಾಸ್, ಪೇಡಾ, ತುಪ್ಪ, ಸೋನಾ ಪಾಪಡಿ ಅಲ್ಲದೇ ಹಾಂಗ್ಯೋ ಐಸಕೀಮನ ಎಲ್ಲಾ ಉತ್ಪನ್ನಗಳು ಹಾಂಗ್ಯೋ ಶಾಪಿಯಲ್ಲಿ ಲಭ್ಯವಿದೆ ಮತ್ತು ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ೨೫ ಮಳಿಗೆಗಳನ್ನು ತೆರೆಯುವ ಯೋಜನೆಯಿದೆ ಎಂದು ಸಂಸ್ಥೆಯ ಆಡಳಿತ ಪಾಲುದಾರ ಸ್ರೀ ಪ್ರದೀಪ ಜಿ. ಪೈ ತಿಳಿಸಿದ್ದಾರೆ.