ಭಟ್ಕಳ, ಮಾರ್ಚ್ 11: ಪ್ರತಿಷ್ಟಿತ ಬ್ಯಾಂಕುಗಳಲ್ಲೊಂದಾದ ಭಟ್ಕಳ ಅರ್ಬನ್ ಕೋ ಆಪ್ರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆ ಮಾರ್ಚ ೧೪ ರಂದು ನಡೆಯಲಿದ್ದು, ಈಗಾಗಲೇ ೧೩ರಲ್ಲಿ ಎರಡು ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಇನ್ನುಳಿದ ೧೧ ಸ್ಥಾನಕ್ಕೆ ಜಿದ್ದಾಜಿದ್ದಿಯ ಸ್ಪರ್ಧೆ ಉಂಟಾಗಿದೆ.
ವಿಶೇಷವೆಂದರೆ ಭಟ್ಕಳ ಅರ್ಬನ್ ಬ್ಯಾಂಕಿನಲ್ಲಿ ೨೫ ವರ್ಷಗಳ ನಂತರ ಚುನಾವಣೆ ನಡೆಯುತ್ತಿರುವುದು. ಹಿಂದೆಲ್ಲಾ ನಿರ್ದೇಶಕ ಸ್ಥಾನಕ್ಕೆ ಭಾರೀ ಪೈಪೋಟಿ ಇದ್ದರೂ ಸಹ ಅವಿರೋಧವಾಗಿಯೇ ಆಯ್ಕೆ ಮಾಡಿಕೊಂಡು ಬರಲಾಗಿತ್ತು. ಆದರೆ ಈ ಸಲ ಮಾತ್ರ ಬ್ಯಾಂಕಿನ ಇತಿಹಾಸದಲ್ಲಿ ಇಷ್ಟೊಂದು ಮಂದಿ ಪೈಪೋಟಿಗಿಳಿದಿರುವುದು ವಿಶೇಷವೇ ಆಗಿದೆ. ಬ್ಯಾಂಕಿನ ಒಟ್ಟೂ ೧೩ ನಿರ್ದೇಶಕ ಸ್ಥಾನದಲ್ಲಿ ದಕ್ಷಿಣಕನ್ನಡ ಜಿಲ್ಲೆಯಿಂದ ಮಹ್ಮದ್ ಅಕ್ರಮ ಮುಸ್ಬಾ ಹಾಗೂ ಉಡುಪಿ ಜಿಲ್ಲೆಯ ಗಂಗೊಳ್ಳಿಯ ಅಬ್ದುಲ್ ಮಜೀದ ಚೌಗುಲೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಉಳಿದಂತೆ ಉತ್ತರ ಕನ್ನಡ ಜಿಲ್ಲೆಯ ಏಳು ಸಾಮಾನ್ಯ ಕ್ಷೇತ್ರಕ್ಕೆ ೧೮ ಮಂದಿ, ೧ ಮಹಿಳಾ ಕ್ಷೇತ್ರಕ್ಕೆ ಇಬ್ಬರು,ಪರಿಶಿಷ್ಟ ಪಂಗಡ/ಜಾತಿ ಮೀಸಲು ಸ್ಥಾನಕ್ಕೆ ಇಬ್ಬರು, ವೃತ್ತಿಪರ ಕ್ಷೇತ್ರವಾದ ಎರಡು ಸ್ಥಾನಕ್ಕೆ ಮೂವರು ಸೇರಿದಂತೆ ಒಟ್ಟೂ ೨೫ ಮಂದಿ ಕಣದಲ್ಲಿದ್ದಾರೆ. ಇದರಲ್ಲಿ ಸಾಮಾನ್ಯ ಕ್ಷೇತ್ರದಿಂದ ಜಾಪರ್ ಸಾಧಿಕ್, ಇಸ್ಮಾಯಿಲ್ ಶಾಬಂದ್ರಿ,ದಾಮ್ದಾ ಮುಮದ್ ಅನ್ಸಾರ, ಮುಮದ್ ಸಾದುಲ್ಲಾ, ಗಣಪತಿ ಎಚ್ ಪೈ, ಶ್ರೀಧರ ಬಿ ನಾಯ್ಕ ಆಸರಕೇರಿ, ಅಬ್ದುಲ್ ಸಾಹಿರಾ,ನಾಸೀರ್ ಹುಸೇನ್ , ಶಹಜಾನ ಶಾಬಂದ್ರಿ, ಮುಮದ್ ಮುಕ್ಕಾನ,ಸಿದ್ದಿಕ ಅಹ್ಮದ್ ರಿಜ್ವಾನ, ಶಂಕರ ನಾಯ್ಕ, ಸೈಯದ್ ಜೈನಾಲುಬಿದ್ದೀನ ಪಾರೂಕಿ,ಶಕೀಲ ಮುಲ್ಲಾ, ನದೀಮ ಮುಲ್ಲಾ, ಅಬುಬುಕರ್ ಕಾಶೀಂಜಿ, ಸೋಮಯ್ಯ ಮಂಜಪ್ಪ ನಾಯ್ಕ, ಮೋಹನ ಮಂಜುನಾಥ ನಾಯ್ಕ, ಶೇಖ ಶಬ್ಬೀರ್, ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಸ್ಥಾನಕ್ಕೆ ಮಾಸ್ತಿ ಸಂಕಯ್ಯ ಮೊಗೇರ ಹಾಗೂ ನಾರಾಯಣ ಯಂಕ ಸಮಗಾರ, ಮಹಿಳಾ ಸ್ಥಾನಕ್ಕೆ ಬೀಬಿ ತಾಹಿರಾ ಹಾಗೂ ಬೀಬಿ ನಸೀಮಾ ಪಿರ್ಜಾದೆ, ವೃತ್ತಿಪರ ಕ್ಷೇತ್ರಕ್ಕೆ ವಿಕ್ಟರ್ ಗೋಮ್ಸ, ನಾಗೇಂದ್ರ ನಾಯ್ಕ,ಪರಿ ಮಹ್ಮದ್ ಹುಸೇನ ಆಯ್ಕೆ ಬಯಸಿ ಕಣದಲ್ಲಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದವರಲ್ಲಿ ಆರು ಮಂದಿ ಹಳೇ ನಿರ್ದೇಶಕರಾಗಿದ್ದಾರೆ. ಬ್ಯಾಂಕಿನಲ್ಲಿ ಒಟ್ಟೂ ೧೨೩೯೪ ಶೇರುದಾರ ಸದಸ್ಯರು ಮತ ಚಲಾಯಿಸುವ ಅಧಿಕಾರ ಹೊಂದಿದ್ದಾರೆ. ನಗರದ ನ್ಯೂ ಇಂಗ್ಲೀಷ್ ಸ್ಕೂಲದಲ್ಲಿ ಮಾರ್ಚ ೧೪ ರಂದು ಬೆಳಿಗ್ಗೆ ೯ರಿಂದ ಸಂಜೆ ೪ ಗಂಟೆಯ ವರೆಗೆ ಚುನಾವಣೆ ನಡೆಯಲಿದೆ. ಮತದಾನಕ್ಕೆ ಬ್ಯಾಂಕಿನ ಗುರುತಿನ ಚೀಟಿ ಖಡ್ಡಾಯವಾಗಿದ್ದು, ಮಾರ್ಚ ೧೪ರ ವರೆಗೆ ಬ್ಯಾಂಕಿನ ಕಚೇರಿಯಲ್ಲಿ ಗುರುತಿನ ಚೀಟಿಯನ್ನು ಸದಸ್ಯರು ಪಡೆಯಬಹುದಾಗಿದೆ ಎಂದು ಸಹಕಾರಿ ಸಹಕಾರಿ ಸಂಘಗಳ ಉಪನಿಬಂಧಕರು ಹಾಗೂ ಭಟ್ಕಳ ಅರ್ಬನ ಬ್ಯಾಂಕಿನ ಚುನಾವಣಾಧಿಕಾರಿಯೂ ಆಗಿರುವ ವೀರಣ್ಣ ಯಳಲಿ ತಿಳಿಸಿದ್ದಾರೆ.