ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ದಲಿತವಿರೋಧಿ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ. ದಿನಗೂಲಿ ನೌಕರರನ್ನು ಖಾಯಂಗೊಳಿಸುವಂತೆ ದಸಂಸ ಆಗ್ರಹ

ಭಟ್ಕಳ: ದಲಿತವಿರೋಧಿ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ. ದಿನಗೂಲಿ ನೌಕರರನ್ನು ಖಾಯಂಗೊಳಿಸುವಂತೆ ದಸಂಸ ಆಗ್ರಹ

Wed, 27 Jan 2010 03:26:00  Office Staff   S.O. News Service
ಭಟ್ಕಳ, ಜನವರಿ 27: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಕಳೆದ ಜ.೨೨ರಿಂದ ಭಟ್ಕಳ ಪುರಸಭೆಯ ದಲಿತ ವಿರೋಧಿ ನೀತಿಯನ್ನು ಅನುಸರಿ ನಡೆಸಿದ ಅನಿರ್ಧಿಷ್ಟಾವಧಿಯ ಧರಣಿ ಸತ್ಯಗ್ರಹವನ್ನು ಸಹಾಯಕ ಕಮಿಷನರ್ ತ್ರೀಲೋಕ ಚಂದ್ರ ಇವರ ಮನವೊಲಿಕೆಯ ಮೇರೆಗೆ ಇಂದು ಸ್ಥಗಿತಗೊಳಿಸಿದರು. ಇಂದು ಸಂಜೆ ಸಹಾಯಕ ಕಮಿಷನರ್ ರಿಗೆ ಭಟ್ಕಳ ಪುರಸಭೇಯ ದಿನಗೂಲಿ ಪೌರ ಕಾರ್ಮಿಕರ ಸಮಸ್ತ ದಾಖಲೆ ಪತ್ರಗಳನ್ನು ನೀಡಿ ಮಾತನಾಡಿದ ದಸಂಸ ಜಿಲ್ಲಾಧ್ಯಕ್ಷ  ಶಿವಾಜಿ ಬನವಾಸಿ ಮಾತನಾಡಿ ಸಹಾಯಕ ಕಮಿಷನರ್ ರು ತಮ್ಮ ಬೇಡಿಕೆಗಳನ್ನು ಪರಿಶಿಲಿಸುವುದಾಗಿ ಆಶ್ವಾಸನೆಯನ್ನು ನೀಡಿದ ಹಿನ್ನೆಲೆಯಲ್ಲಿ ತಮ್ಮ ಧರಣಿ ಸತ್ಯಗ್ರಹವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದ ಅವರು ಇಂದು ಹಮ್ಮಿಕೊಳ್ಳಲು ಉದ್ದೇಶಿಸಿದ್ದ ರಾ.ಹೆ.೧೭ ಬಂದ್ ನ್ನು ಇದೇ ಉದ್ದೇಶದಿಂದ ಕೈಬಿಡಲಾಗಿದೆ ಎಂದರು. 

1992 ರಿಂದ ಭಟ್ಕಳದ ಪುರಸಭೆಯಲ್ಲಿ ದಿನಗೂಲಿ ಪೌರಕಾರ್ಮಿಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದು ನಮ್ಮನ್ನು ಖಾಯಂಗೊಳಿಸುವಂತೆ ೧೯೮೬ರಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿನ ಪ್ರಕಾರ ಸರಕಾರದ ಪೌರಾಡಳಿತ ನಿರ್ದೇಶನಾಲಯದಿಂದ ಜಿಲ್ಲಾಧಿಕಾರಿಗಳು ಕಾರವಾರ ರಿಗೆ ಬಂದ ಸುತ್ತೋಲೆಯಂತೆ ಭಟ್ಕಳ ಪುರಸಭೆಗೆ ಪತ್ರವೊಂದನ್ನು ಬರೆದಿದ್ದು ಅದರಲ್ಲಿ ಕಳೆದ ಹತ್ತು ವರ್ಷಗಳಿಂದ ದಿನಗೂಲಿ ನೌಕರರಾಗಿ ದುಡಿಯುತ್ತಿರುವ ೫೧ ಪೌರಕಾರ್ಮಿಕರ ಯಾದಿಯಲ್ಲಿ ಕೇವಲ ೨೭ ಜನರ ಮಾಹಿತಿಯನ್ನು ಸರಿಯಾಗಿ ಕಳುಹಿಸಿದ್ದು ಉಳಿದ ೨೪ ಜನರ ಮಾಹಿತಿಯನ್ನು ವರು ಹೇಳಿದೆ ಕೆಲಸವನ್ನು ಮಾಡಲಿಲ್ಲಿ ಎಂದು  ಸರಿಯಾಗಿ ಕಳುಹಿಸದೆ ಅಧಿಕಾರಿಗಳಿಗೆ ತಪ್ಪು ಮಾಹಿತಿಯನ್ನು ಅವರ ದಾರಿತಪ್ಪಿಸಿರುವ (ಮಿಸ್ ಗೈಡ್) ಭಟ್ಕಳದ ಪುರಸಭೇಯ ಅಧಿಕಾರಿಗಳಾದ ಅನಿಲ್ ಪ್ರಭು ಮತ್ತು ನೀಲಕಂಠ ಮೇಸ್ತ ಎಂಬುವವರು ದುರುದ್ದೇಶ ಪೂರಕವಾಗಿ ನಮ್ಮ ಮೇಲೆ ಸೇಡನ್ನು ತೀರಿಸಿಕೊಂಡಿದ್ದಾರೆ ಎಂದು ಇಂದು ನೀಡಿದ ಮನವಿಯಲ್ಲಿ ಪುರಸಭೇಯ ಅಧಿಕಾರಿಗಳ ಮೇಲೆ ಆರೋಪವನ್ನು ಹೊರಿಸಲಾಗಿದೆ. 
 
ಸರಕಾರಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ಇಲ್ಲಿನ ಹತ್ತುವರ್ಷಕ್ಕೂ ಮೇಲ್ಪಟ್ಟು ಪೌರಕಾರ್ಮಿಕರಾಗಿ ದುಡಿದ ೨೪ ಜನರನ್ನು ವಂಚಿಸಿದ ಈ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕು ಹಾಗೂ ಅವರನ್ನು ಇಲ್ಲಿಂದ ವರ್ಗಾವಣೆಯನ್ನು ಮಾಡಿ ಇಲ್ಲಿನ ಪೌರ ಕಾರ್ಮಿಕರನ್ನು ಖಾಯಂ ದಿನಗೂಲಿ ನೌಕರರೆಂದು ಪರಿಗಣಿಸಬೇಕೆಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಭಟ್ಕಳ ಪುರಸಭೆಯ ಈ ದಲಿತ ವಿರೋಧಿ ನೀತಿಯನ್ನು ಅನುಸರಿಸುವತ್ತಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಅವರನ್ನು ಕೂಡಲೆ ಇಲ್ಲಿಂದ ವರ್ಗಾವಣೆ ಮಾಡಬೇಕು ಮತ್ತು ದಿನಗೂಲಿ ನೌಕರರನ್ನು ಖಾಯಂಗೊಳಿಸಿ ಅವರಿಗೆ ಕನಿಷ್ಠ ವೇತನವನ್ನು ನೀಡಬೇಕು ಇಲ್ಲವಾದರೆ ತಾಜವು ಮುಂದಿನ ದಿನಗಳಲ್ಲಿ ಉಗ್ರಹೋರಾಟಕ್ಕಿಳಿಯುವುದು ಅನಿವಾರ್ಯವಾದಿತೆಂದು ದಸಂಸ  ಜಿಲ್ಲಾ ಸಂಚಾಲಕ ಶಿವಾಜಿ ಬನವಾಸಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಕಾ‌ಋವಾರ ತಾಲೂಕಾ ಸಂಚಾಲಕ ಶ್ಯಾಂಸುಂದರ್ ಗೋಕರ್ಣ,ಜಿಲ್ಲಾ ಸಂಘಟನಾ ಸಂಚಾಲಕ ಮಲ್ಲೇಶ ವಾಲ್ಮಿಕಿ ಮತ್ತಿತರರು ಹಾಜರಿದ್ದರು. 

Share: