ಭಟ್ಕಳ, ಜನವರಿ 15: ಖ್ಯಾತ ಸಾಹಿತಿ ದಿ.ಮಾನಾ ಮಾಳ್ಕೋಡು ನಾರಾಯಣ ಹೆಗಡೆ ಅವರ ತೃತೀಯ ಪುಣ್ಯತಿಥಿ ಗುರುವಾರ ಮುರುಡೇಶ್ವರದ ಯಕ್ಷರಕ್ಷೆ ಹಾಗೂ ಮಾನಾ ಕುಟುಂಬದವರ ಸಹಯೋಗದೊಂದಿಗೆ ಮಾನಸ್ಮೃತಿಯಲ್ಲಿ ಮಾನಾ ಅವರ ಪಂಚಾಮೃತ ಕೃತಿಯನ್ನು ಬಿಡುಗಡೆಗೊಳಿಸುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳ ಅರ್ಬನ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್.ಎ.ರಝಾಕ್ ಎಲೆ ಮರೆಯ ಕಾಯಿಯಂತಿದ್ದ ಮಾನಾ ಎಂದೂ ಪ್ರಚಾರ ಬಯಸಿದವರಲ್ಲ, ಅವರ ಅಪ್ರಕಟಿತ ಕೃತಿಗಳನ್ನು ಪ್ರಕಟಿಸುವುದರ ಮೂಲಕ ಅವರ ಪುತ್ರ ಶಂಭು ಹೆಗಡೆಯವರು ಘನ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಯಕ್ಷರಕ್ಷೆ ಮುರುಡೇಶ್ವರ ಇದರ ಅಧ್ಯಕ್ಷ ಡಾ.ಐ.ಆರ್ ಭಟ್ ಮಾತನಾಡಿ ಮಾನಾ ಅವರು ಸದಾ ಅಂತರ್ಮುಖಿಯಾಗಿರುತ್ತಿದ್ದು ಅವರ ಕೃತಿಗಳಗಲ್ಲಿ ಜನರ ನೋವು ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ಅವರು ಬರಹವು ಮನುಷ್ಯ ಜೀವನದ ಸತ್ಯ ಸಂಗತಿಗಳನ್ನು ಕಾಣಬಹುದಾಗಿದ್ದು ವಾಸ್ತವಕ್ಕೆ ಹತ್ತಿರವಾಗಿರುತ್ತದೆ ಎಂದರು.
ಡಾ. ಎಂ.ಪಿ. ಭಂಡಾರಿ ಪಂಚಾಮೃತ ಕೃತಿಯನ್ನು ವಿಮರ್ಶಿಸಿದರು. ಮಹಾಬಲ ಹೆಗಡೆ, ಡಿ.ವಿ.ಸುಬ್ರಮಣ್ಯ, ಆರ್,ವಿ.ಕಾಮತ್, ಮೂಕಾಂಬು ಹೆಗಡೆ ಈ ಸಂದರ್ಭಲ್ಲಿ ಮಾನಾ ರ ಬದುಕಿನ ಕುರಿತು ಮಾತನಾಡಿದರು. ಮಾನಾರ ಪುತ್ರ ಶಂಭುಹೆಗಡೆ ಸ್ವಾಗತಿಸಿದರು. ರತ್ನ ಹೆಗಡೆ ವಂದಿಸಿದರು.