ಮೂಡಬಿದಿರೆ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜೋಕಟ್ಟೆ ಕ್ಷೇತ್ರ ಸಮಿತಿಯ ವತಿಯಿಂದ ಇತ್ತೀಚೆಗೆ ಜೋಕಟ್ಟೆಯಿಂದ ಪೊರ್ಕೋಡಿಗೆ ಹೋಗುವ ಹದಗೆಟ್ಟಿದ್ದ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಲಾಯಿತು.

ರಸ್ತೆಯಲ್ಲಿ ಆಳವಾದ ಹೊಂಡವಿದ್ದ ಕಾರಣ ಹಲವಾರು ದ್ವಿಚಕ್ರವಾಹನ ಸವಾರರಿಗೆ ಅಪಘಾತ ಸಂಭವಿಸಿ ಗಾಯಗಳಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಎ.ಡಿ.ಪಿ.ಐ ಜೋಕಟ್ಟೆ ಕ್ಷೇತ್ರ ಕಮಿಟಿ ಉಪಾದ್ಯಕ್ಷರಾದ ಸಂಶುದ್ದೀ.ರವರು ಜೆಸಿಬಿ ಹಾಗೂ ಲಾರಿಯನ್ನು ದೊರಕಿಸುವ ಮೂಲಕ ಸಹಕರಿಸಿದರೆ ಇದರ ಖಜಾಂಜಿಯಾದ ಅಬ್ದುಲ್ ಬಾಸಿತ್ ರೋಲರ್ ಹಾಗೂ ಡೀಸೆಲ್ ನೀಡಿ ಸಹಕರಿಸಿದರು. ಹೆಚ್ಚಿನ ಕಾರ್ಯಕರ್ತರು ದಿನವಿಡೀ ಶ್ರಮಪಡುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಯಿತು. ಎ.ಡಿಪಿಯವರ ಈ ಪ್ರಯತ್ನವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.
ಚಿತ್ರ, ವರದಿ: ಆರೀಫ್ ಜೋಕಟ್ಟೆ, ಸೌದಿ ಅರೇಬಿಯಾ