ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರ್ಕಳ: ದತ್ತಮಾಲಾ ಅಭಿಯಾನ - ನಗರದಲ್ಲಿ ಮೆರವಣಿಗೆ

ಕಾರ್ಕಳ: ದತ್ತಮಾಲಾ ಅಭಿಯಾನ - ನಗರದಲ್ಲಿ ಮೆರವಣಿಗೆ

Mon, 30 Nov 2009 17:20:00  Office Staff   S.O. News Service
ಕಾರ್ಕಳ, ನವೆಂಬರ್ ೩೦:ಅನಂತಶಯನದಿಂದ ಪ್ರಾರಂಭವಾದ ಈ ಶೋಭಯಾತ್ರೆಯು ಮಾಜಿ ಶಾಸಕ ಸುನಿಲ್ ಕುಮಾರ್ ನೇತೃತ್ವದಲ್ಲಿ ತಾಲೂಕು ಕಛೇರಿಯ ಬಳಿಯಿರುವ ರಾಮಮಂದಿರದಲ್ಲಿ ಸಮಾಪನಗೊಂಡಿತು.
 
ಬಳಿಕ ಸಭೆಯನ್ನುದ್ದೇಶಿಸಿ ದಿಕ್ಸೂಚಿ ಭಾಷಣಗೈದ ಸುದರ್ಶನ್ ಮೂಡಬಿದಿರೆ ಮಾತನಾಡಿ, ಲವ್ ಜಿಹಾದ್ ಎಂಬುವುದು ಸುಮಾರು ೨೦ ವರ್ಷಗಳ ಹಿಂದೆಯೇ ಪ್ರಚಲಿತದಲ್ಲಿದ್ದರೂ, ಬಹಿರಂಗವಾಗಿರುವುದು ಇತ್ತೀಚಿನ ದಿನಗಳಲ್ಲಿ. ಹಿಂದೂ ಯುವತಿಯರು ದಿಕ್ಕು ತಪ್ಪದಂತೆ , ಅನ್ಯ ಕೋಮಿನ ಯುವಕರ ಮೋಸದ ಜಾಲಕ್ಕೆ ಬಲಿಬೀಳದಂತೆ ಮನವೊಲಿಸಬೇಕು. ಹಿಂದೂ ಧರ್ಮದ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.  
 
ವಿಶ್ವಹಿಂದೂ ಪರಿಷದ್‌ನ ಗೌರವಾಧ್ಯಕ್ಷ ರಘುನಾಥ ಪಾಟಕ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದೂ ಪರಿಷದ್‌ನ ಜಿಲ್ಲಾಧ್ಯಕ್ಷ ಪ್ರಮಾನಂದ, ತಾಲೂಕಾಧ್ಯಕ್ಷ ಭಾಸ್ಕರ ಕೋಟ್ಯಾನ್, ಬಜರಂಗದಳದ ಜಿಲ್ಲಾ ಸಂಚಾಲಕ ಸುನಿಲ್ ಕೆ.ಆರ್, ತಾಲೂಕು ಸಂಚಾಲಕ ಸುಮಿತ್ ಶೆಟ್ಟಿ ಬೈಲೂರು, ಉಪಸ್ಥಿತರಿದ್ದರು.
 
ರತ್ನಾಕರ ಅಮೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಸುಧಾಕರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 


Share: